ಇಂದಿನ ತರಕಾರಿ ದರ: ಒಂದೇ ದಿನದಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಬರೋಬ್ಬರಿ 22 ರೂ. ಹೆಚ್ಚಳ - ಇಂದಿನ ತರಕಾರಿ ದರ
Bangalore vegetables price : ಇಂದು ಬೆಂಗಳೂರಿನಲ್ಲಿ ಕೆ.ಜಿ ಕೊತ್ತಂಬರಿ ಸೊಪ್ಪಿನ ಬೆಲೆ 22 ರೂ. ಏರಿಕೆ ಕಂಡಿದ್ದು, ಟೊಮೇಟೊ ಬೆಲೆ 5 ರೂ. ಬೆಲೆ ಕಡಿಮೆಯಾಗಿದೆ. ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.
Vegetables Price
By
Published : Nov 26, 2021, 10:12 AM IST
ಬೆಂಗಳೂರು: ಕಳೆದ ಒಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರು. ಆದರೆ, ಇಂದು ಟೊಮೇಟೊ, ಬೆಳ್ಳುಳ್ಳಿ , ದಪ್ಪ ಮೆಣಸಿನಕಾಯಿ ಸೇರಿದಂತೆ ಕೆಲ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ಕೊಂಚ ಇಳಿಕೆ ಕಂಡಿದೆ.
ನಿನ್ನೆ ಪ್ರತಿ ಕೆ.ಜಿ ಟೊಮೇಟೊ ಬೆಲೆ 103 ರೂ. ಇತ್ತು. ಆದರೆ ಇಂದು 98 ರೂ. ಗೆ ಲಭ್ಯವಾಗುತ್ತಿದ್ದು, 5 ರೂ. ಬೆಲೆ ಕಡಿಮೆಯಾಗಿದೆ. ಹಾಗೆಯೇ ಬೆಳ್ಳುಳ್ಳಿ ದರ ಕೂಡ 132 ರೂ. ಯಿಂದ 128 ರೂ.ಗೆ ಇಳಿಕೆಯಾಗಿದೆ. ದಪ್ಪ ಮೆಣಸಿನಕಾಯಿ ಬೆಲೆ ನಿನ್ನೆ 128 ರೂ. ಇತ್ತು. ಆದರೆ, ಇಂದು 124ರೂ. ಇದ್ದು, 4 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಮಾತ್ರ ಇನ್ನೂ ಏರಿಕೆ ಕಂಡಿದೆ. 86 ರೂ. ಇದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಇಂದು 108 ಕ್ಕೆ ಏರಿಕೆಯಾಗಿದೆ. ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 22 ರೂ. ಏರಿಕೆಯಾಗಿದೆ.