ಕರ್ನಾಟಕ

karnataka

ETV Bharat / city

10-12ನೇ ತರಗತಿ ಪರೀಕ್ಷೆ ರದ್ಧತಿಗೆ ಆಗ್ರಹಿಸಿ ಸಚಿವರ ಮನೆ ಮುಂದೆ ವಾಟಾಳ್​ ಹೋರಾಟ - 10, 12ನೇ ತರಗತಿ ಪರೀಕ್ಷೆ ರದ್ದತಿಗೆ ಆಗ್ರಹ

ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಒಂಟಿ ಹೋರಾಟ ಮಾಡಿದ ವಾಟಾಳ್​ ನಾಗರಾಜ್​ ಎಸ್ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಸರಿಯಲ್ಲ. ಪರೀಕ್ಷೆಯಿಲ್ಲದೇ ಎಲ್ಲರನ್ನೂ ಪಾಸ್ ಮಾಡಿ ಎಂದು ಒತ್ತಾಯಿಸಿದರು.

 ಪರೀಕ್ಷೆ ರದ್ದತಿಗೆ ಆಗ್ರಹ
ಪರೀಕ್ಷೆ ರದ್ದತಿಗೆ ಆಗ್ರಹ

By

Published : May 25, 2021, 4:33 PM IST

Updated : May 25, 2021, 8:46 PM IST

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಎಸ್ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಸರಿಯಲ್ಲ. ಪರೀಕ್ಷೆಯಿಲ್ಲದೇ ಎಲ್ಲರನ್ನೂ ಪಾಸ್ ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಇಂದು ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಏಕಾಂಗಿ ಹೋರಾಟ ಮಾಡಿದ ವಾಟಾಳ್, ಸಚಿವ ಸುರೇಶ್ ಕುಮಾರ್ ಮಕ್ಕಳ ವಿಷಯದಲ್ಲಿ ಆಟ ಆಡಬಾರದು. ಹಠ ಮಾಡದೇ ಪ್ರಾಮಾಣಿಕವಾಗಿ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.

ವಾಟಾಳ್ ನಾಗರಾಜ್​​ ಹೋರಾಟ

ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಬೇಕು. ಇಡೀ ರಾಜ್ಯದ ಮಕ್ಕಳ ತಂದೆ-ತಾಯಿಗಳ ಅನುಮತಿ ಕೇಳಿ ತೀರ್ಮಾನಕ್ಕೆ ಬನ್ನಿ. ಕೊರೊನಾದಿಂದ ಮಕ್ಕಳನ್ನ ಉಳಿಸಿ ಎಂದು ಮನವಿ ಮಾಡಿದರು.

Last Updated : May 25, 2021, 8:46 PM IST

ABOUT THE AUTHOR

...view details