ಕರ್ನಾಟಕ

karnataka

ETV Bharat / city

ಮೇಕೆದಾಟುಗಾಗಿ ಮೇಕೆಗೆ ಅಭಿಷೇಕ: ವಾಟಾಳ್‌, ಮೇಕೆ ವಶಕ್ಕೆ ಪಡೆದ ಪೊಲೀಸರು

ಸಿಎಂ ಕೂಡಲೇ ಸರ್ವಪಕ್ಷದ ಸಭೆ ಕರೆದು ಪ್ರಧಾನಿಯನ್ನು ಭೇಟಿ ಮಾಡಬೇಕು. ಮೇಕೆದಾಟು ಯೋಜನೆ ಜೊತೆಗೆ ಮಹಾದಾಯಿ ವಿಚಾರವಾಗಿಯೂ ಚರ್ಚಿಸಬೇಕು. ಇದೇ ತಿಂಗಳ 19 ರಂದು ಆನೇಕಲ್ ಬಳಿ ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲಿದ್ದೇವೆ ಎಂದು ವಾಟಾಳ್ ನಾಗರಾಜ್‌ ತಿಳಿಸಿದರು.

vatal-nagaraj
ವಾಟಾಳ್​ ನಾಗರಾಜ್

By

Published : Jan 13, 2022, 4:54 PM IST

ಬೆಂಗಳೂರು:ಮೇಕೆದಾಟು ಯೋಜನೆಯನ್ನು ಕೂಡಲೇ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್​ ನಾಗರಾಜ್​ ನಗರದ ಮೈಸೂರು ಬ್ಯಾಂಕ್​ ವೃತ್ತದ ಬಳಿ ಇಂದು ಪ್ರತಿಭಟನೆ ನಡೆಸಲು ಮುಂದಾಗಿ, ಮೇಕೆಯೊಂದಕ್ಕೆ ಅಭಿಷೇಕ ಮಾಡುತ್ತಿದ್ದಾಗ ಇದನ್ನು ತಡೆದ ಪೊಲೀಸರು ಮೇಕೆ ಮತ್ತು ವಾಟಾಳ್​ ನಾಗರಾಜ್​ರನ್ನು ವಶಕ್ಕೆ ಪಡೆದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ವಾಟಾಳ್​ ನಾಗರಾಜ್​, ಪೊಲೀಸರು ನನ್ನನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಮೇಕೆಯನ್ನು ಬಂಧಿಸಿರುವುದು ಇತಿಹಾಸದಲ್ಲೇ ಮೊದಲಾಗಿದೆ. ಮೇಕೆಗೆ ಅಭಿಷೇಕ ಮಾಡಿ ಮೂರೂ ಪಕ್ಷಗಳ ವಿರುದ್ಧ ಹೋರಾಟ ಮಾಡಬೇಕು ಎಂದುಕೊಂಡಿದ್ದೆವು. ಪೊಲೀಸರ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದರು.

ಮೇಕೆದಾಟು ಜಟಾಪಟಿಯ ವಿಚಾರವಾಗಿ ಮಾತನಾಡಿ, ಮೇಕೆದಾಟು ಯೋಜನೆಗಾಗಿ ನಿರಂತರ ಹೋರಾಟ ಮಾಡುತ್ತಿರುವವರು ಕನ್ನಡ ಪರ ಹೋರಾಟಗಾರರು, ಸಂಘಟನೆಗಳು. 2016 ರಲ್ಲೇ ತಮಿಳುನಾಡಿನ ವಿರುದ್ಧ ಕರ್ನಾಟಕ ಬಂದ್​ ಮಾಡಿದಂತಹ ಕೆಚ್ಚೆದೆಯ ಕನ್ನಡ ವೀರರು. ಮೇಕೆದಾಟಿಗೆ ಹೋಗಿ ಸರ್ಕಾರವನ್ನು ನಾಚಿಸುವಂತೆ ಶಂಕುಸ್ಥಾಪನೆ ಮಾಡಿದ ಕನ್ನಡ ವೀರರು ನಾವು ಎಂದು ಗುಡುಗಿದರು.

ಸರ್ವ ಪಕ್ಷ ಸಭೆ ಕರೆಯಲು ಆಗ್ರಹ

ಸಿಎಂ ಕೂಡಲೇ ಸರ್ವ ಪಕ್ಷದ ಸಭೆ ಕರೆದು ಪ್ರಧಾನಿಯನ್ನು ಭೇಟಿ ಮಾಡಬೇಕು. ಮೇಕೆದಾಟು ಯೋಜನೆ ಜೊತೆಗೆ ಮಹಾದಾಯಿ ವಿಚಾರವಾಗಿ ಚರ್ಚಿಸಬೇಕು. ಇದೇ ತಿಂಗಳ 19 ರಂದು ಆನೇಕಲ್ ಬಳಿ ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್‌ ಪಾದಯಾತ್ರೆ ಹಿಂಪಡೆದಿದ್ದು ಸಿಎಂಗೆ ಸಿಕ್ಕ ರಾಜತಾಂತ್ರಿಕ ಜಯ: ಸಚಿವ ಡಾ.ಕೆ‌.ಸುಧಾಕರ್

ABOUT THE AUTHOR

...view details