ಬೆಂಗಳೂರು :ನಗರದ ವಸಂತಪುರದ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಯುಕೆಯಿಂದ ವಾಪಸಾಗಿದ್ದ ತಾಯಿ-ಮಗಳಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ 28 ದಿನಗಳ ಕಾಲ ಅಪಾರ್ಟ್ಮೆಂಟ್ನ ಸೀಲ್ಡೌನ್ ಮಾಡಲಾಗಿದೆ.
ಅಪಾರ್ಟ್ಮೆಂಟ್ ನಿವಾಸಿಗಳು ಸರ್ಕಾರಿ ಕ್ವಾರಂಟೈನ್ಗೆ ಒಪ್ಪದ ಹಿನ್ನೆಲೆ ಅಪಾರ್ಟ್ಮೆಂಟ್ನಿಂದ ಜನ ಹೊರ ಬಾರದಂತೆ ಸೀಲ್ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳಿಗೆ ಬಿಬಿಎಂಪಿಯನ್ನು ಸಂಪರ್ಕಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಅದರ ವೆಚ್ಚ ನಿವಾಸಿಗಳೇ ಭರಿಸಬೇಕಿದೆ.
ತಾಯಿ-ಮಗಳಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆ : ವಸಂತಪುರ ಅಪಾರ್ಟ್ಮೆಂಟ್ ಸೀಲ್ಡೌನ್ ಜೊತೆಗೆ ಯುಕೆಯಿಂದ ವಾಪಾಸ್ಸಾದ ಜೆಪಿನಗರದ ನಿವಾಸಿಯಲ್ಲೂ ರೂಪಾಂತರ ಕೊರೊನಾ ವೈರಸ್ ಕಂಡು ಬಂದಿದೆ. ಈಗಾಗಲೇ ವಸಂತಪುರದಲ್ಲಿ ಮಹಿಳೆಯ ಪತಿಗೂ ಕೊರೊನಾ ಸೋಂಕು ಹಬ್ಬಿದೆ. ಹೀಗಾಗಿ, ಅಪಾರ್ಟ್ಮೆಂಟ್ನಲ್ಲಿರುವ 39 ಜನರ ಮೇಲೆ ಪಾಲಿಕೆ ಆರೋಗ್ಯ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ.
ಓದಿ:ವಸಂತಪುರ ಅಪಾರ್ಟ್ಮೆಂಟ್ನಲ್ಲಿ ರೂಪಾಂತರಿ ಕೊರೊನಾ ವೈರಸ್ : ವಯೋವೃದ್ಧರು ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್
ಈಗಾಗಲೇ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ ಯಾಕೆ ಶಿಫ್ಟ್ ಆಗಬೇಕೆಂದು ಹಠ ಮಾಡಿದ ಹಿನ್ನೆಲೆ ಸಂಪೂರ್ಣ ಅಪಾರ್ಟ್ಮೆಂಟ್ ಸೀಲ್ಡೌನ್ ಮಾಡಿ ಗೇಟ್‌ಗೆ ಬೀಗ ಹಾಕಲು ಪಾಲಿಕೆ ಮುಂದಾಗಿದೆ. ಜೊತೆಗೆ ಮೂರು ಶಿಫ್ಟ್ನಂತೆ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.