ಬೆಂಗಳೂರು: ವೀಕೆಂಡ್ ಕರ್ಫ್ಯೂ ವಿರೋಧಿಸಿ ವಿವಿಧ ಉದ್ಯಮಗಳ ಸಂಘಟನೆಗಳು ನಾಳೆ ಮಹತ್ವದ ಸಭೆ ನಡೆಸಲು ಮುಂದಾಗಿವೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್, ಬಾರ್, ಪಬ್ & ರೆಸ್ಟೋರೆಂಟ್ ಸಂಘ, ಕರ್ನಾಟಕ ಮ್ಯಾರೇಜ್ ಹಾಲ್ ವೆಲ್ ಫೇರ್ ಅಸೋಸಿಯೇಷನ್, ಜಿಮ್, ಸ್ವಿಮ್ಮಿಂಗ್ ಪೂಲ್ ಮಾಲೀಕರು ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದವರೆಗೆ ಕಾದುನೋಡುವ ತಂತ್ರ :ರಾಜಧಾನಿಯ ಅರಮನೆ ಮೈದಾನ ವೈಟ್ ಪೆಟಲ್ಸ್ನಲ್ಲಿ ಹಲವು ಸಂಘಟನೆಗಳು ಇಂದು ಸಭೆ ನಡೆಸಲಿವೆ. ನಿನ್ನೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಶುಕ್ರವಾರದವರೆಗೆ ಕಾದು ನೋಡೋಣ ಎಂದು ಸರ್ಕಾರ ಸುಮ್ಮನಾಗಿದೆ. ಹೀಗಾಗಿ, ಹಲವು ಉದ್ಯಮಗಳ ಸಂಘಗಳು ಶುಕ್ರವಾರದವರೆಗೆ ಕಾದು ನೋಡುವ ತಂತ್ರ ಅನುಸರಿಸಿವೆ.
ಹೋಟೆಲ್ಗಳ ಮಾಲೀಕರ ಸಂಘದ ಒತ್ತಡ :ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆದು ನಷ್ಟದಿಂದ ಪಾರು ಮಾಡಬೇಕು ಎಂದು ಸರ್ಕಾರದ ಮೇಲೆ ರಾಜ್ಯ ಹೋಟೆಲ್ಗಳ ಮಾಲೀಕರ ಸಂಘ ಒತ್ತಡ ಹೇರುವ ಪ್ರಯತ್ನವನ್ನು ಮುಂದುವರಿಸಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಅವಧಿಯನ್ನು ರಾತ್ರಿ 11ರಿಂದ ಪ್ರಾರಂಭಿಸಬೇಕು. ವಾರಾಂತ್ಯ ಕರ್ಫ್ಯೂ ಹಿಂತೆಗೆದುಕೊಳ್ಳಬೇಕು. ಸಾಧ್ಯವಾಗದಿದ್ದರೆ ವಾರಾಂತ್ಯದಲ್ಲಿ ಹೋಟೆಲ್ಗಳ ಒಟ್ಟು ಸಾಮರ್ಥ್ಯದ ಶೇ. 50ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಬೇಕೆಂದು ಮೊರೆಯಿಟ್ಟಿದೆ. ರಾಜ್ಯ ಹೋಟೆಲ್ಗಳ ಮಾಲೀಕರ ಸಂಘದ ನಿಯೋಗ ನಿನ್ನೆ ಸಚಿವ ಅಶ್ವತ್ಥ್ ನಾರಾಯಣ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.
ನಷ್ಟದ ಹೊಡೆತ :ರಾಜ್ಯದಲ್ಲಿ 65,000ಕ್ಕೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ಐಷಾರಾಮಿ ಹೋಟೆಲ್‌ಗಳಿವೆ. ಈ ಉದ್ಯಮದಲ್ಲಿ ಅವಿದ್ಯಾವಂತ, ಬಡವರು, ಮಹಿಳೆಯರು ಸೇರಿ ಅಧಿಕ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಕೋವಿಡ್ನಿಂದ ಹೋಟೆಲ್ ಉದ್ಯಮ ತತ್ತರಿಸಿದ್ದು, ನಷ್ಟ ತಾಳಲಾಗದೇ ಶೇ.30ರಷ್ಟು ಉದ್ಯಮಿಗಳು ಹೋಟೆಲ್‌ಗಳನ್ನು ಮುಚ್ಚಿದ್ದಾರೆ. ವಾರಾಂತ್ಯದ ಕರ್ಫ್ಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾಸಿಕ 20 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.
ಮನವಿ: