ಬೆಂಗಳೂರು : ವ್ಯಾಕ್ಸಿನ್ ಹಾಕಿಸೋ ನೆಪದಲ್ಲಿ ಪೊಲೀಸರನ್ನ ರೌಂಡ್ಸ್ ಹೊಡೆಸಿದ ವ್ಯಕ್ತಿಯ ವಾಹನ ಸೀಜ್ ಮಾಡಲಾಗಿದ್ದು, ಎನ್‌ಡಿಎಂಎ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಸಿಟಿ ಮಾರ್ಕೇಟ್ ಬಳಿ ಪೊಲೀಸರು ಅನಗತ್ಯ ಓಡಾಡುವ ವಾಹನಗಳ ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಾಲಾಜಿ ಎನ್ನುವ ವ್ಯಕ್ತಿ, ಪ್ರತಿ ದಿನ ತಾನು ಹತ್ತು ಜನರಿಗೆ ವ್ಯಾಕ್ಸಿನ್ ಹಾಕಿಸುವುದಾಗಿ ಪೊಲೀಸರಿಗೆ ಮೊದಲು ಆವಾಜ್ ಹಾಕಿದ್ದ.
ಬಳಿಕ ದಾಖಲೆ ಕೇಳಿದಾಗ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ವರಸೆ ಬದಲಿಸಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೋಗುತ್ತಿದ್ದೇನೆ ಎಂದು ಕುಂಟು ನೆಪ ಹೇಳಲು ಶುರು ಮಾಡಿದ.
ವ್ಯಾಕ್ಸಿನ್ ಕುಂಟು ನೆಪ ಹೇಳಿ ಖಾಕಿಗೆ ರೌಂಡ್ಸ್ ಹೊಡೆಸಿದ ವ್ಯಕ್ತಿಯ ಕಾರ್ ಸೀಜ್.. ಹೈಡ್ರಾಮಾ ಮುಂದುವರೆಸಿದ ಬಾಲಾಜಿ ಪೊಲೀಸರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದ. ಆದರೆ, ಭಾನುವಾರ ಆಗಿದ್ದರಿಂದ ಮಧ್ಯಾಹ್ನದ ನಂತರ ಯಾವುದೇ ಲಸಿಕೆ ಹಾಕುತ್ತಿಲ್ಲ ಎಂದು ಗೊತ್ತಾಗಿದೆ. ಮತ್ತೆ ವಿಕ್ಟೋರಿಯಾ ಆಸ್ಪತ್ರೆ ಸುತ್ತ ಸುತ್ತಾಟ ನೆಡಸಿ ಪೊಲೀಸರಿಗೆ ತಲೆ ನೋವು ತಂದಿದ್ದ.
ಬಾಲಾಜಿ ನಾಟಕ ತಿಳಿದ ಪೊಲೀಸರು ಅವನ ಕಾರ್ ಸೀಜ್ ಮಾಡಿ ದಾಖಲೆ ಕೇಳಿದ್ದಾರೆ. ಆದ್ರೆ, ಆಸಾಮಿ ಏನೂ ರೆಸ್ಪಾನ್ಸ್ ಕೊಡದೆ ಇದ್ದನ್ನು ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ.
ಸದ್ಯ ಬಾಲಾಜಿ ವಿರುದ್ಧ ಕಲಾಸಿಪಾಳ್ಯ ಪೊಲೀಸರಿಂದ ಎಫ್ಐಆರ್ ದಾಖಲಿಸಲಾಗಿದೆ. ಎನ್‌ಡಿಎಂಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.