ಕರ್ನಾಟಕ

karnataka

ETV Bharat / city

ಸೋಂಕಿತ 100 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಿದ ವಾಣಿವಿಲಾಸ್​​ ಆಸ್ಪತ್ರೆ ವೈದ್ಯರು.. - ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ

ವಿಕ್ಟೋರಿಯಾದ ಟ್ರಾಮಾ ಮತ್ತು ತುರ್ತು ಆರೈಕೆ ಕೇಂದ್ರವೂ ಇದಕ್ಕೆ ಸಾಕ್ಷಿಯಾಗಿದೆ. ಆಸ್ಪತ್ರೆಯ ವೈದ್ಯರ ಸಮನ್ವಯತೆಯೊಂದಿಗೆ ಹೆರಿಗೆ ಮಾಡಿಸಲಾಗಿದೆ. ಜನಿಸಿದ ಮಗುವನ್ನ ತಾಯಿಯಿಂದ ಬೇಪರ್ಡಿಸಿ ವಾಣಿ ವಿಲಾಸ್ ಆಸ್ಪತ್ರೆಯಲ್ಲಿಟ್ಟು ತಾಯಿಗೆ ಕೊರೊನಾ ಗುಣಮುಖವಾಗುವವರೆಗೆ ಆರೈಕೆ ಮಾಡಲಾಗುತ್ತೆ..

vaanivilas-hospital
ವಾಣಿವಿಲಾಸ್​​ ಆಸ್ಪತ್ರೆ

By

Published : Jul 17, 2020, 4:47 PM IST

ಬೆಂಗಳೂರು: ಫ್ರಂಟ್‌ಲೈನ್ ವಾರಿಯರ್ಸ್ ಕಾಣದ ವೈರಸ್ ಎದುರು ನಿಂತು ಅದೆಷ್ಟೋ ಭವಿಷ್ಯದ ಕನಸುಗಳಿಗೆ ಅಡಿಪಾಯ ಹಾಕಿದ್ದಾರೆ. ನಗರದ ಪ್ರತಿಷ್ಠಿತ ಹೆರಿಗೆ ಆಸ್ಪತ್ರೆ ವಾಣಿವಿ ಲಾಸ್​​ಗೆ ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳಿಂದಲ್ಲೂ ಹುಡುಕಿ ಕೊಂಡು ಬರುವವರು ಇದ್ದಾರೆ. ಇನ್ನೇನು ನಮ್ಮ ಕೈಯಲ್ಲಿ ಆಗೋದಿಲ್ಲ ಅಂತಾ ಕೈಚೆಲ್ಲಿ ಬಿಟ್ಟ ಕೇಸ್​​ಗಳೆಲ್ಲವೂ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಸಕ್ಸಸ್​​ ಆಗಿವೆ.

ಆ ಜೀವಗಳಿಗೆ ಮರುಜೀವ ಕೊಟ್ಟ ದೇವರುಗಳಿವರು..

ವಾಣಿ ವಿಲಾಸ್‌ ಆಸ್ಪತ್ರೆಯಲ್ಲಿ ಕೊರೊನಾ ಆತಂಕದ ನಡುವೆ ಬರುವ ಕ್ರಿಟಿಕಲ್ ಕೇಸ್​ಗಳನ್ನ ತಮ್ಮ ಸಮಯ ಪ್ರಜ್ಞೆಯಿಂದ, ಧೈರ್ಯದಿಂದ ನಿಭಾಯಿಸಿದ್ದಾರೆ. ನಕಾರಾತ್ಮಕ ಅಂಶದ, ಕೊರೊನಾ ಆತಂಕದ ನಡುವೆಯೂ ನಿರಾತಂಕವಾಗಿ 100 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ಯಶಸ್ವಿಯಾಗಿದ್ದಾರೆ. ಗರ್ಭಿಣಿಯರಿಗೆ ಸೋಂಕು ತಗುಲಿದ್ರೂ ಒಳಗಿರುವ ಶಿಶುವಿಗೆ ಸೋಂಕು ತಗುಲದಂತೆ ಹೆರಿಗೆ ಮಾಡಿಸಿದ್ದು, ಜನಿಸಿರುವ ಎಲ್ಲ ನವಜಾತ ಶಿಶುಗಳಿಗೂ ಕೊರೊನಾ ನೆಗೆಟಿವ್ ಬಂದಿದೆ. ಈ ಮೂಲಕ ವೈದ್ಯರು ಒಂದು ವಿಶೇಷ ಮೈಲುಗಲು ಸೃಷ್ಟಿಸಿದ್ದಾರೆ.

ವಿಕ್ಟೋರಿಯಾದ ಟ್ರಾಮಾ ಮತ್ತು ತುರ್ತು ಆರೈಕೆ ಕೇಂದ್ರವೂ ಇದಕ್ಕೆ ಸಾಕ್ಷಿಯಾಗಿದೆ. ಆಸ್ಪತ್ರೆಯ ವೈದ್ಯರ ಸಮನ್ವಯತೆಯೊಂದಿಗೆ ಹೆರಿಗೆ ಮಾಡಿಸಲಾಗಿದೆ. ಜನಿಸಿದ ಮಗುವನ್ನ ತಾಯಿಯಿಂದ ಬೇಪರ್ಡಿಸಿ ವಾಣಿ ವಿಲಾಸ್ ಆಸ್ಪತ್ರೆಯಲ್ಲಿಟ್ಟು ತಾಯಿಗೆ ಕೊರೊನಾ ಗುಣಮುಖವಾಗುವವರೆಗೆ ಆರೈಕೆ ಮಾಡಲಾಗುತ್ತೆ. ಮೇ 8ರಿಂದ ಮೊದಲ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಲಾಗಿತ್ತು. ಅಲ್ಲಿಂದ ಇಲ್ಲಿ ತನಕ ಸೋಂಕಿತ 100 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಕೋವಿಡ್ ಇಲ್ಲದ 1000ಕ್ಕೂ ಅಧಿಕ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ.

ತಿಂಗಳ ಅಂಕಿಅಂಶ :ಮಾರ್ಚ್-322, ಏಪ್ರಿಲ್-834, ಮೇ-749, ಜೂನ್-337, ಒಟ್ಟು= 2242 ಮಾರ್ಚ್ 22 ರಿಂದ ಜೂನ್ 15ರವರೆಗೆ 2,242 ನವಜಾತ ಶಿಶುಗಳ ಜನನವಾಗಿದೆ. ಕೊರೊನಾ‌ ಸೋಂಕಿನ ವಿರುದ್ಧ ವೈದ್ಯರು ಹೋರಾಡಿ ಸೋಂಕು ತಗುಲದಂತೆ ಮುಂಜಾಗ್ರತೆ ವಹಿಸಿದ್ದಾರೆ.

ABOUT THE AUTHOR

...view details