ಬೆಂಗಳೂರು:ಹೆಡಗೇವಾರ್ ಕುರಿತಾದ ವಿಚಾರಗಳು ಇಪ್ಪತೈದು ವರ್ಷದ ಹಿಂದೆಯೇ ಪಠ್ಯದಲ್ಲಿ ಸೇರಿಸಬೇಕಿತ್ತು. ಈ ತಪ್ಪನ್ನು ನಮ್ಮ ಸರ್ಕಾರ ಸರಿ ಮಾಡಿದೆ. ಯಾರಿಗೋ ಕಹಿಯಾಗುತ್ತದೆ ಎಂಬ ಕಾರಣಕ್ಕೆ ಹೆಡಗೇವಾರ್ ವಿಚಾರ ಕೈ ಬಿಡಲು ಸಾಧ್ಯವಿಲ್ಲ. ರಾಷ್ಟ್ರೀಯ ವಾದಿಗಳ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡುವ ನಮ್ಮ ಬದ್ಧತೆ ಭವಿಷ್ಯದಲ್ಲೂ ಮುಂದುವರಿಯುತ್ತದೆ ಎಂದು ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಬಿಜೆಪಿ ಆರ್ಎಸ್ಎಸ್ ನಾಯಕರನ್ನು ಹಿಂದೂ ರಕ್ಷಕರಂತೆ ಬಿಂಬಿಸುತ್ತಿದೆ ಎಂದು ಮಾಡಿದ್ದ ಟ್ವೀಟ್ಗೆ, ಸಂಘದ ಶಾಖೆಗಳಲ್ಲಿ ನಮಗೆ ಕಲಿಸಿರುವ ಪ್ರಕಾರ ದೇಶ ವನ್ನು ಪ್ರೀತಿಸಬೇಕು ದೇಶವನ್ನು ಒಡೆಯುವ, ಧರ್ಮ ಒಡೆಯುವ ಕೆಲಸ ಮಾಡಬಾರದು ಹಾಗೂ ಅಂತಹ ವಿಘಟನಾ ಶಕ್ತಿಗಳನ್ನು ವಿರೋಧಿಸಬೇಕು, ಗೋ ಪೂಜೆ ಮಾಡಬೇಕು. ಎಲ್ಲ ಪೂಜಾ ಪದ್ಧತಿಗಳನ್ನು ಗೌರವದಿಂದ ಕಾಣಬೇಕು, ವೋಟಿನ ರಾಜಕಾರಣ ಮಾಡಬಾರದು ಹಾಗೂ ಸಮಾಜ ಕಟ್ಟುವುದಕ್ಕಾಗಿ ರಾಜಕಾರಣ ಉಪಕರಣ ಮಾತ್ರ ಎನ್ನುವುದು ಎಂದು ಸರಣಿ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.