ಕರ್ನಾಟಕ

karnataka

ETV Bharat / city

ಸೈನಿಕರು, ರೈತರು ಮತ್ತು ವೈದ್ಯರು ದೈವಸ್ವರೂಪಿಗಳು : ವಸತಿ ಸಚಿವ ವಿ. ಸೋಮಣ್ಣ - ವೈದ್ಯರ ದಿನಾಚರಣೆ ಕಾರ್ಯಕ್ರಮ

ವಿ.ಸಿ.ಎನ್. ಡಾಕ್ಟರ್ಸ್ ವೆಲ್ ಫೇರ್ ಆಸೋಸಿಯೇಷನ್ ವತಿಯಿಂದ ವಿಜಯನಗರ ಕಾಸಿಯ ಭವನದಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

V Somanna
ವಸತಿ ಸಚಿವ ಸೋಮಣ್ಣ

By

Published : Jul 3, 2022, 3:43 PM IST

ಬೆಂಗಳೂರು :ದೇಶ ರಕ್ಷಣೆ ಮಾಡುವ ಸೈನಿಕ, ಅನ್ನ ನೀಡುವ ರೈತ ಮತ್ತು ಆರೋಗ್ಯವಂತ ಸಮಾಜಕ್ಕೆ ಶ್ರಮಿಸುವ ವೈದ್ಯರು ದೈವ ಸ್ವರೂಪಿಗಳು. ಕೋವಿಡ್​ ಸಂದರ್ಭದಲ್ಲಿ ಜನತೆಗೆ ಬಹಳ ಸಂಕಷ್ಟವಾಗಿತ್ತು. ಆ ಸಮಯದಲ್ಲಿ ವೈದ್ಯರ ಸೇವೆ ಸ್ಮರಣೀಯ ಎಂದು ವಸತಿ ಸಚಿವ ಸೋಮಣ್ಣ ವಿ.ಸಿ.ಎನ್.ಡಾಕ್ಟರ್ಸ್ ವೆಲ್ ಫೇರ್ ಆಸೋಸಿಯೇಷನ್ ವತಿಯಿಂದ ವಿಜಯನಗರ ಕಾಸಿಯ ಭವನದಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.

ಕಾರ್ಯಕ್ರಮವನ್ನು ಡಾ.ಅಂಜನಪ್ಪ, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯ ಎಸ್. ರಾಜು, ಒಕ್ಕಲಿಗರ ಸಂಘದ ಅಧ್ಯಕ್ಷ ಪುತ್ತೂರಾಯ, ಚಲನಚಿತ್ರ ನಟ ಶರಣ್, ಆರೋಗ್ಯಧಿಕಾರಿ ಡಾ ಶಿವಕುಮಾರ್ ಉದ್ಘಾಟಿಸಿದರು.

ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯ ಡಾ ಎಸ್.ರಾಜು ಮಾತನಾಡಿ ವೈದ್ಯರು ಸಹ ಮನುಷ್ಯರು, ಅವರಿಗೂ ಸಹ ಎಲ್ಲರಂತೆ ಕುಟುಂಬವಿದೆ. ರೋಗಿಗಳ ಆರೈಕೆಗೆ ಕುಟುಂಬದ ಕಡೆ ಗಮನಹರಿಸದೆ ಕೆಲಸ ನಿರ್ವಹಿಸುತ್ತಾರೆ. ವೈದ್ಯರು ಸಹ ಮಾನಸಿಕ, ದೃಹಿಕವಾಗಿ ಸದೃಢವಾಗಿರಲು ಕ್ರೀಡಾಕೂಟ, ಯೋಗ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ದೇಶದಲ್ಲಿ ಪ್ರತಿಪಕ್ಷಗಳ ನಾಯಕರು ಮಾತನಾಡುವ ಪರಿಸ್ಥಿತಿ ಇಲ್ಲ: ಯಶವಂತ್​​ ಸಿನ್ಹಾ

ABOUT THE AUTHOR

...view details