ಬೆಂಗಳೂರು: ಕೊಚ್ಚೆ ಮೇಲೆ ಕಲ್ಲು ಹಾಕಿದರೆ ಅದು ನಮ್ಮ ಮುಖಕ್ಕೆ ಸಿಡಿಯುತ್ತದೆ. ಹಾಗಾಗಿ ಕೊಚ್ಚೆ ಮೇಲೆ ಕಲ್ಲು ಹಾಕಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿಯನ್ನು ಕೊಚ್ಚೆಗೆ ಹೋಲಿಸಿದ ವಿ.ಸೋಮಣ್ಣ - benglore V. Somanna election campaign news
ಕೊಚ್ಚೆ ಮೇಲೆ ಕಲ್ಲು ಹಾಕಿದರೆ ಅದು ನಮ್ಮ ಮುಖಕ್ಕೆ ಸಿಡಿಯುತ್ತದೆ. ಹಾಗಾಗಿ ಕೊಚ್ಚೆ ಮೇಲೆ ಕಲ್ಲು ಹಾಕಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಮಹಾಲಕ್ಷ್ಮಿ ಲೇಔಟ್ನಲ್ಲಿ ಹೆಚ್ .ಡಿ ಕುಮಾರಸ್ವಾಮಿಯವರು, ಸೋಮಣ್ಣ, ಬಜಾರ್ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ರು, ನಿಮ್ಮ ಹಳೆಯ ದಿನಗಳನ್ನು ನೆನೆಪು ಮಾಡಿಕೊಳ್ಳಿ ಎಂದು ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಶಿವಾಜಿನಗರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ವಿ. ಸೋಮಣ್ಣ, ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಕುಮಾರಸ್ವಾಮಿ ಅವರ ಅರೋಪಕ್ಕೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಕೊಚ್ಚೆ, ಕೊಚ್ಚೆ ಮೇಲೆ ಕಲ್ಲು ಹಾಕಿದ್ರೆ ಅದು ನಮ್ಮ ಮೇಲೆಯೇ ಹಾರುತ್ತದೆ. ಅಂತ ಕೊಚ್ಚೆ ಬಗ್ಗೆ ನಾನು ಮಾತನಾಡುವುದಿಲ್ಲ. ಆತನಿಗೆ ಇನ್ನು ಒಂದು ತಿಂಗಳು ಟೈಮ್ ಕೊಡ್ತಿನಿ. ಅಂತಹ ಒಂದು ಸಣ್ಣ ಘಟನೆ ಇದ್ರೆ ತೋರಿಸಲಿ. ಹೀಗೆ ಲಜ್ಜೆಗೆಟ್ಟ, ಸ್ವಾಭಿಮಾನ ಇಲ್ಲದ , ಇನ್ನೊಬ್ಬರ ಮನಸ್ಸನ್ನು ನೋಯಿಸುವುದನ್ನೇ ದಂಧೆ ಮಾಡಿಕೊಂಡಿರುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಚಿವ ಸೋಮಣ್ಣ ತಿರುಗೇಟು ನೀಡಿದ್ರು.