ಕರ್ನಾಟಕ

karnataka

ETV Bharat / city

ರಾಜಾಹುಲಿ ಹೋಗಿ ಈಗ ಯಡಿಯೂರಪ್ಪ ರಾಜಾಇಲಿ.. ಮಾಜಿ ಸಂಸದ ಉಗ್ರಪ್ಪ ವ್ಯಂಗ್ಯ - v s ugrappa statement on b s yadiyurappa

ಚುನಾವಣೆಯಲ್ಲಿ ಗೆದ್ದು ಬಂದ್ರೂ ಇನ್ನೂ ಮಂತ್ರಿ ಮಾಡಲಿಲ್ಲ. ಅಮಿತ್ ಶಾ ಸೂಚನೆಗೆ ಕಾದು ಕುಳಿತಿದ್ದಾರೆ. ಧೈರ್ಯವಿದ್ದರೆ ಯಡಿಯೂರಪ್ಪನವರೇ ಸಂಪುಟ ವಿಸ್ತರಿಸಿ. ಇಲ್ಲವೇ ನನ್ನ ಕೈಲಾಗಲ್ಲ ಅಂತಾ ಸುಮ್ಮನಾಗಿಬಿಡಿ ಎಂದು ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂಗೆ ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ಸಲಹೆ ನೀಡಿದರು.

v-s-ugrappa-statement-on-b-s-yadiyurappa
ಸಚಿವ ಸಂಪುಟ ಕುರಿತು ವಿ ಸ ಉಗ್ರಪ್ಪ ಹೇಳಿಕೆ

By

Published : Jan 14, 2020, 4:45 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ರಾಜಾಹುಲಿ ಹೋಗಿ ಈಗ ರಾಜಾ ಇಲಿಯಾಗಿದ್ದಾರೆ. ಅಮಿತ್ ಶಾ ಭೇಟಿಗೆ ರಾಜಾಹುಲಿಗೆ ಅವಕಾಶವೇ ಸಿಗ್ತಿಲ್ಲ. ಯಡಿಯೂರಪ್ಪನವರದ್ದು ಇಲಿಯ ಪರಿಸ್ಥಿತಿಯಂತಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಕ್ಕು ಬಂದರೆ ಇಲಿ ಹೇಗೆ ಬಿಲ ಹುಡುಕುತ್ತದೆಯೋ ಹಾಗೆ ಯಡಿಯೂರಪ್ಪ ಬಿಲ ಹುಡುಕುತ್ತಿದ್ದಾರೆ. ಸಂಪುಟ ವಿಸ್ತರಣೆ ಮಾಡೋಕೂ ಸಿಎಂಗೆ ಆಗ್ತಿಲ್ಲ. 24 ಗಂಟೆಯೊಳಗೆ ಸಚಿವರನ್ನಾಗಿ ಮಾಡ್ತೇವೆ ಅಂತಾ ಉಪಚುನಾವಣೆಯಲ್ಲಿ ಜನರ ಮುಂದೆ ಕೊಚ್ಚಿಕೊಂಡಿದ್ರು. ಚುನಾವಣೆಯಲ್ಲಿ ಗೆದ್ದು ಬಂದ್ರೂ ಇನ್ನೂ ಮಂತ್ರಿ ಮಾಡಲಿಲ್ಲ. ಅಮಿತ್ ಶಾ ಸೂಚನೆಗೆ ಕಾದು ಕುಳಿತಿದ್ದಾರೆ. ಧೈರ್ಯವಿದ್ದರೆ ಯಡಿಯೂರಪ್ಪನವರೇ ಸಂಪುಟ ವಿಸ್ತರಿಸಿ. ಇಲ್ಲವೇ ನನ್ನ ಕೈಲಾಗಲ್ಲ ಅಂತಾ ಸುಮ್ಮನಾಗಿಬಿಡಿ ಎಂದರು.

ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ವ್ಯಂಗ್ಯ..

ಪಕ್ಷದಲ್ಲಿಯೇ ನಿಮಗೆ ಉಸಿರುಕಟ್ಟಿಸುವ ಪ್ರಯತ್ನ ನಡೆದಿದೆ. ವ್ಯವಸ್ಥಿತವಾಗಿ ನಿಮ್ಮನ್ನ ಮುಗಿಸುವ ಪ್ರಯತ್ನ ನಡೆದಿದೆ. ಇದನ್ನ ಮೊದಲು ಅರಿತುಕೊಳ್ಳಿ. ಧೈರ್ಯವಾಗಿ ಯಾರಿಗೂ ಹೆದರದೆ ಸಂಪುಟ ವಿಸ್ತರಿಸಿ. ಮುಂದಿನ 24 ಗಂಟೆಯಲ್ಲಾದರೂ ಸಂಪುಟ ವಿಸ್ತರಿಸಿ. ಇಲ್ಲವಾದರೆ ನನ್ನ ಕೈಲಿ ಆಗಲ್ಲ ಅಂತಾ ಒಪ್ಪಿಕೊಳ್ಳಿ. ಇಲ್ಲ ರಾಜೀನಾಮೆ ಬಿಸಾಕಿ ತೆರಳಿ ಎಂದು ಸಲಹೆ ಇತ್ತರು.

ಅಮಿತ್ ಶಾ ಧಮ್ಕಿ:ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ದಿಗೆ ಹಣ ಕೇಳಿದ್ರೆ, ಅಮಿತ್ ಶಾ ಧಮ್ಕಿ ಹಾಕಿದ್ದಾರೆ ಅಂತe ವರದಿ ಬಂದಿವೆ. ಹತ್ತಾರು ಬಾರಿ ರಾಜಾಹುಲಿ ಯಡಿಯೂರಪ್ಪ, ಅಮಿತ್ ಶಾ-ಮೋದಿ ಭೇಟಿಗೆ ಪ್ರಯತ್ನ ಪಟ್ಟರೂ ಅವಕಾಶ ಸಿಕ್ಕಿಲ್ಲ ಎಂದರು.

ಡಿಕೆಶಿ ಜೊತೆ ನಾವಿದ್ದೇವೆ:ಡಿ ಕೆ ಶಿವಕುಮಾರ್ ಜೊತೆ ಕಾಂಗ್ರೆಸ್ ಇದೆ. ಕಪಾಲ ಬೆಟ್ಟದಲ್ಲಿ ಯಾವ ಪ್ರತಿಮೆ ನಿರ್ಮಾಣ ಮಾಡಬೇಕು ಅನ್ನೋದನ್ನ ಅಲ್ಲಿಯ ಜನರು ಹಾಗೂ ಡಿ ಕೆ ಶಿವಕುಮಾರ್ ನಿರ್ಧರಿಸ್ತಾರೆ. ಬಿಜೆಪಿ ಅವರು ಕನಕಪುರದಲ್ಲೂ ಕೋಮು ಭಾವನೆ ಬಿತ್ತಿ ಬೇಳೆ ಬೇಯಿಸಿಕೊಳ್ಳಲು ನೋಡ್ತಿದ್ದಾರೆ. ಇದು ಸಾಧ್ಯವಾಗೋದಿಲ್ಲ ಎಂದರು.

For All Latest Updates

ABOUT THE AUTHOR

...view details