ಬೆಂಗಳೂರು : ಇಂದು ಒಳ್ಳೆಯ ಶಿಕ್ಷಣವನ್ನು ಪಡೆಯುತ್ತಿದ್ದೇವೆ ಆದ್ರೂ ಕೂಡಾ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಮಾಡ್ತಾನೇ ಇದ್ದೀವಿ, ಶಿಕ್ಷಣದ ಮೂಲಕ ಸಮಾಜಕ್ಕೆ ಒಳ್ಳೆಯದಾಗ್ಬೇಕು ಎಂದು ಡಿಸಿಎಂ ಅಶ್ವತ್ಥ ನಾರಾಯಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಕ್ಷಣ ಪಡೆದ್ರೂ, ಒಳ್ಳೆಯದು ಕೆಟ್ಟದ್ದು ಎರಡನ್ನೂ ಮಾಡ್ತಿದ್ದೀವಿ: ಡಿಸಿಎಂ ಅಶ್ವತ್ಥ ನಾರಾಯಣ್ - ಉತ್ತಮನಾಗು ಉಪಕಾರಿಯಾಗು 2020
ಇವತ್ತು ನಾವೆಲ್ಲ ಒಳ್ಳೆಯ ವಿದ್ಯಾಭ್ಯಾಸ ಮಾಡ್ತಿದ್ದೀವಿ. ಆದ್ರೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮಾಡ್ತಾನೇ ಇದ್ದೀವಿ. ಶಿಕ್ಷಣದ ಮೂಲಕ ಸಮಾಜಕ್ಕೆ ಒಳ್ಳೆಯದಾಗಬೇಕು. ಅಭಿವೃದ್ಧಿ ಹೊಂದಿದ್ರೆ ಮಾತ್ರ ಸಮಾಜಕ್ಕೆ ಒಳ್ಳೆಯದಾಗಲ್ಲ, ದೃಢವಾದ ಸಮಾಜ ಕಟ್ಟು ಅದಕ್ಕೆ ಶಿಕ್ಷಣ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಡಿಸಿಎಂ ಅಶ್ವತ್ಥ ನಾರಾಯಣ ನೀತಿ ಪಾಠ ಹೇಳಿದರು.
ಉತ್ತಮನಾಗು ಉಪಕಾರಿಯಾಗು 2020 ಅಭಿಯಾನ
ಸ್ವಾಮಿ ವಿವೇಕಾನಂದ ಅವರ ನೆನಪಿನ ದಿನವಾಗಿ ಸಮರ್ಥ ಭಾರತ ಆಯೋಜಿಸಿರುವ 'ಉತ್ತಮನಾಗು ಉಪಕಾರಿಯಾಗು-2020 ಅಭಿಯಾನ'ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿವೇಕಾನಂದರ ಬಗ್ಗೆ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.