ಬೆಂಗಳೂರು:ಬಿಬಿಎಂಪಿಯ ಮೇಯರ್, ಉಪಮೇಯರ್ ಚುನಾವಣೆ ನಡೆಸುವ ಸಮಯದಲ್ಲಿಯೇ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಪ್ರಾದೇಶಿಕ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಮೇಯರ್ ಎಲೆಕ್ಷನ್ ಮುಂದೂಡಿ, ಸ್ಥಾಯಿ ಸಮಿತಿ ಚುನಾವಣೆ ನಡೆಸಲು ನಗರಾಭಿವೃದ್ಧಿ ಇಲಾಖೆ ಪತ್ರ - ಮೇಯರ್ ಎಲೆಕ್ಷನ್
ಮೇಯರ್ ಚುನಾವಣೆಯನ್ನು ಮುಂದೂಡಲು ಹಾಗೂ ಮೇಯರ್ ಎಲೆಕ್ಷನ್ ಜೊತೆಗೇ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಎ. ವಿಜಯಕುಮಾರ್ ಪತ್ರ ಬರೆದಿದ್ದಾರೆ.
ಸೆ. 27 ರಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆಯ ಸೆಕ್ಷನ್ 10 (1), ಮತ್ತು ಸೆಕ್ಷನ್ 11 (2) (ಬಿ) ಹಾಗೂ 1979 ರ ಕೆಎಮ್ಸಿ ನಿಯಮಗಳ ಪ್ರಕಾರ, ಮೇಯರ್ ಚುನಾವಣೆಯನ್ನು ಮುಂದೂಡಲು ಹಾಗೂ ಮೇಯರ್ ಎಲೆಕ್ಷನ್ ಜೊತೆಗೆ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಎ. ವಿಜಯಕುಮಾರ್ ಪತ್ರ ಬರೆದಿದ್ದಾರೆ. ಈ ಪತ್ರ ಈಗಾಗಲೇ ಪ್ರಾದೇಶಿಕ ಚುನಾವಣಾ ಆಯೋಗಕ್ಕೆ ರವಾನೆಯಾಗಿದ್ದು, ಕೆಲವೇ ಹೊತ್ತಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಿಕೆ ಮಾಡಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ.
ಒಟ್ಟಿನಲ್ಲಿ ಬಿಜೆಪಿ ಮೇಯರ್ ಅಭ್ಯರ್ಥಿ ಆಯ್ಕೆ ಗೊಂದಲದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮುಸುಕಿನ ಗುದ್ದಾಟದಲ್ಲಿ ಎಲೆಕ್ಷನ್ ಮುಂದೂಡಲ್ಪಟ್ಟಿದೆ. ಜೊತೆಗೆ ಡಿ.4 ರಂದು ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಕೊನೆಯಾಗುವುದರಿಂದ ಅಂದೇ ಮೇಯರ್ ಆಯ್ಕೆ ನಡೆದರೆ, ಎರಡು ತಿಂಗಳು ಅಧಿಕಾರ ಅವಧಿ ಬಿಜೆಪಿ ಕಳೆದುಕೊಂಡಂತೆ ಆಗಲಿದೆ. ಹೀಗಿದ್ದೂ ಚುನಾವಣೆ ಮುಂದೂಡುವಂತೆ ಈ ಸೂಚನೆ ಹೊರಡಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದ್ರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತಕ್ಕೆ ಬೋನಸ್ ಅಧಿಕಾರ ಸಿಗಬಹುದು ಅಥವಾ ಆಡಳಿತ ಅಧಿಕಾರಿ ನೇಮಕವಾಗುವ ಸಾಧ್ಯತೆಯೂ ಇದೆ.