ಕರ್ನಾಟಕ

karnataka

ETV Bharat / city

ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಸಾಗಾಟ... ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಕಳ್ಳ! - ಜ್ಯೂಸರ್​ ಯಂತ್ರದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಯುಪಿ ವ್ಯಕ್ತಿ,

ಮ್ಯಾನುಯಲ್ ಜ್ಯೂಸರ್ ಯಂತ್ರದೊಳಗೆ ಮರೆಮಾಚಿ ಚಿನ್ನದ ರಾಡ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಕಳ್ಳನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

UP Man Smuggles Gold Rods, UP Man Smuggles Gold Rods Hidden in Juicer, accused arrested at Bengaluru Airport, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಯುಪಿ ವ್ಯಕ್ತಿ, ಜ್ಯೂಸರ್​ ಯಂತ್ರದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಯುಪಿ ವ್ಯಕ್ತಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿ ಬಂಧನ,
ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಸಾಗಾಟ

By

Published : Dec 23, 2021, 3:44 AM IST

ದೇವನಹಳ್ಳಿ : ಮ್ಯಾನುಯಲ್ ಜ್ಯೂಸರ್ ಯಂತ್ರದೊಳಗೆ ಮರೆಮಾಚಿ ಎರಡು ಚಿನ್ನದ ರಾಡ್​ಗಳನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಆತನಿಂದ 930 ಗ್ರಾಂ ತೂಕದ 45.8 ಲಕ್ಷ ಮೌಲ್ಯದ ಎರಡು ಚಿನ್ನದ ರಾಡ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಸಾಗಾಟ

ಕಳೆದ ಮಂಗಳವಾರ ಶಾರ್ಜಾದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಅರೇಬಿಯಾ ಜಿ9 496 ವಿಮಾನ ಆಗಮಿಸಿತ್ತು. ಈ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬನನ್ನು ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್ ವಿಭಾಗದ ಏರ್ ಇಂಟೆಲಿಜೆನ್ಸ್ ಯೂನಿಟ್ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ವೇಳೆ ಮ್ಯಾನುಯಲ್ ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಓದಿ:ವಿದ್ಯುತ್ ದೀಪಗಳ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆಗೆ ಚಿಂತನೆ: ಸದನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಮಾಹಿತಿ

ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಸಾಗಾಟ

ಉತ್ತರ ಪ್ರದೇಶದ 33 ವರ್ಷದ ವ್ಯಕ್ತಿ ಮ್ಯಾನುಯಲ್ ಜ್ಯೂಸರ್ ಯಂತ್ರದ ಬೆಳ್ಳಿಯ ಪೈಪ್​ನಲ್ಲಿ ಎರಡು ಚಿನ್ನದ ರಾಡ್​ಗಳನ್ನ ಮರೆಮಾಚಿ ಕಳ್ಳಸಾಗಾಣಿಕೆ ಮಾಡುತ್ತಿದ್ದ. ಕಸ್ಟಮ್ಸ್ ಅಧಿಕಾರಿಗಳು ಈತನನ್ನು ವಿಚಾರಣೆ ನಡೆಸಿದ್ದಾಗ ಈತ ನೀಡಿದ ಹೇಳಿಕೆಯಲ್ಲಿ ಗೊಂದಲ ಇದ್ದ ಕಾರಣದಿಂದ ಮ್ಯಾನುಯಲ್ ಜ್ಯೂಸರ್ ಯಂತ್ರವನ್ನ ತಪಾಸಣೆ ನಡೆಸಿದ್ದಾರೆ. ಅಕ್ರಮವಾಗಿ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲು ಮಾಡಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಅತನಿಂದ 930 ಗ್ರಾಂ ತೂಕದ 45, 81, 180 ರೂಪಾಯಿ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.

For All Latest Updates

ABOUT THE AUTHOR

...view details