ದೊಡ್ಡಬಳ್ಳಾಪುರ: ಆರು ವರ್ಷಗಳಿಂದ ಶಾಂತವಾಗಿದ್ದ ತಾಲೂಕಿನಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಶಾಸಕ ಟಿ.ವೆಂಕಟರಮಣಯ್ಯ ವಾಗ್ದಾಳಿ ನಡೆಸಿದರು.
6 ವರ್ಷ ಶಾಂತವಾಗಿದ್ದ ತಾಲೂಕಿನಲ್ಲಿ ಈಗ ಅಹಿತಕರ ಘಟನೆಗಳು ನಡೆಯುತ್ತಿವೆ: ಟಿ.ವೆಂಕಟರಮಣಯ್ಯ - ದೊಡ್ಡಬಳ್ಳಾಪುರ ಶಾಸಕ ಶಾಸಕ ಟಿ.ವೆಂಕಟರಮಣಯ್ಯ
ಆರು ವರ್ಷಗಳಿಂದ ಶಾಂತವಾಗಿದ್ದ ತಾಲೂಕಿನಲ್ಲಿ ಕಳೆದ ಎರಡು ಮೂರು ತಿಂಗಳಿಂದ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಶಾಸಕ ಟಿ.ವೆಂಕಟರಮಣಯ್ಯ ವಾಗ್ದಾಳಿ ನಡೆಸಿದರು.
![6 ವರ್ಷ ಶಾಂತವಾಗಿದ್ದ ತಾಲೂಕಿನಲ್ಲಿ ಈಗ ಅಹಿತಕರ ಘಟನೆಗಳು ನಡೆಯುತ್ತಿವೆ: ಟಿ.ವೆಂಕಟರಮಣಯ್ಯ](https://etvbharatimages.akamaized.net/etvbharat/prod-images/768-512-4607686-thumbnail-3x2-lek.jpg)
ನಿನ್ನೆ ನಗರದ ಕೊಂಗಾಡಿಯಪ್ಪನವರ ಪ್ರತಿಮೆಯನ್ನ ದುಷ್ಕರ್ಮಿಗಳು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ತಾಲೂಕಿನಲ್ಲಿ ಎಲ್ಲವೂ ಸರಿಯಾಗಿತ್ತು. ಶಾಂತಿಯುತವಾದ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಕಳೆದ ಎರಡು ಮೂರು ತಿಂಗಳುಗಳಿಂದ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಪೊಲೀಸರು ಜಾಗೃತರಾಗಬೇಕು ಎಂದರು.
ಇನ್ನು ಕಳೆದ ಆರು ವರ್ಷದಲ್ಲಿ ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಆಡಳಿತ ಮತ್ತು ಸುಮಾರು ಆರು ತಿಂಗಳು ಸಮ್ಮಿಶ್ರ ಸರ್ಕಾರದ ಆಡಳಿತವಿತ್ತು. ಆದ್ರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಶಾಂತಿ ಕದಡುವ ಪ್ರಕರಣಗಳು ನಡೆಯುತ್ತಿವೆ ಎಂಬ ಉದ್ದೇಶದ ಹೀಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಡಿ.ಕೆ ಶಿವಕುಮಾರ್ ಆಪ್ತರೆಂದೇ ಗುರುತಿಸಿಕೊಂಡಿರುವ ಶಾಸರು ಯಾವ ಉದ್ದೇಶದಿಂದ ಹೀಗೆ ಹೇಳಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.