ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ದೊರೆಯಲಿ ಎಂಬ ನಿಟ್ಟಿನಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ತಿಳಿಸಿದ್ದಾರೆ.
ಹುಬ್ಬಳ್ಳಿಗೆ ರೈಲ್ವೆ ನೇಮಕಾತಿ ಮಂಡಳಿ ಸ್ಥಳಾಂತರ ನಿರ್ಧಾರ: ಸ್ವಾಗತಾರ್ಹ ಎಂದು ಜೆಡಿಎಸ್ - Union minister Suresh Angadi
ರೈಲ್ವೆ ನೇಮಕಾತಿ ಮಂಡಳಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುವ ಸುರೇಶ್ ಅಂಗಡಿ ಅವರ ನಿರ್ಧಾರ ಸ್ವಾಗತಾರ್ಹ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ರಮೇಶ್ ಬಾಬು
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕನ್ನಡಿಗರಿಗೆ ಉದ್ಯೋಗ ದೊರೆಯಲಿ ಎಂದು ರೈಲ್ವೆ ನೇಮಕಾತಿ ಮಂಡಳಿ ಹುಬ್ಬಳ್ಳಿಗೆ ಸ್ಥಳಾಂತರಿಸುವ ಸುರೇಶ್ ಅಂಗಡಿ ನಿರ್ಧಾರ ಸ್ವಾಗತಾರ್ಹ.
ಸಚಿವರು ಹೇಳಿಕೆಗೆ ಸೀಮಿತವಾಗದೇ ಅದನ್ನು ಜಾರಿಗೊಳಿಸಲಿ. ಮೊದಲ ಬಾರಿಗೆ ಮಹಾರಾಷ್ಟ್ರವಾದಿ ಸಚಿವರಿಂದ ರಾಜ್ಯದ ಪರವಾದ ಹೇಳಿಕೆ ಬಂದಿದ್ದು, ನಮ್ಮ ಬಿಜೆಪಿ ಸಂಸದರು ರಾಜ್ಯದ ಭಾಷೆ, ನೆಲ, ಜಲದ ಪರವಾಗಿರಲಿ ಎಂದು ಆಶಿಸಿದ್ದಾರೆ.
Last Updated : Sep 16, 2019, 9:18 AM IST