ಕರ್ನಾಟಕ

karnataka

ETV Bharat / city

ನಾಳೆ ಬಿಜೆಪಿ ಕಚೇರಿಗೆ ಅಮಿತ್ ಶಾ ಭೇಟಿ: ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಾಳೆ ಈ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

union-home-minister
ಕೇಂದ್ರ ಗೃಹ ಸಚಿವ ಅಮಿತ್ ಶಾ

By

Published : May 2, 2022, 5:35 PM IST

Updated : May 2, 2022, 6:50 PM IST

ಬೆಂಗಳೂರು:ಕೇಂದ್ರ ಗೃಹ ಸಚಿವ ಅಮಿತ್ ಶಾ ಮಲ್ಲೇಶ್ವರಂನ ಟೆಂಪಲ್ ಸ್ಟ್ರೀಟ್‌ನಲ್ಲಿರುವ ಬಿಜೆಪಿ ಕಚೇರಿಗೆ ನಾಳೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಗಣ್ಯರು ಸಂಚರಿಸುವ ಮಾರ್ಗದಲ್ಲಿ ತಾತ್ಕಾಲಿಕ ವಾಹನ ನಿಲುಗಡೆ ನಿಷೇಧಿಸಿ ನಗರ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಎಲ್ಲೆಲ್ಲಿ ನಿಷೇಧ..

ಮಲ್ಲೇಶ್ವರಂ 18ನೇ ಅಡ್ಡ ರಸ್ತೆ:ಸಂಪಿಗೆ ರಸ್ತೆ ಕಾಫಿ ಡೇಯಿಂದ ಮಾರ್ಗೋಸಾ 18ನೇ ಅಡ್ಡ ರಸ್ತೆವರೆಗೆ.

ಮಾರ್ಗೋಸಾ ರಸ್ತೆ:ಮಾರ್ಗೋಸಾ 18ನೇ ಅಡ್ಡರಸ್ತೆಯಿಂದ ಮಾರ್ಗೋಸಾ 15ನೇ ಅಡ್ಡ ರಸ್ತೆಯವರೆಗೆ.

ಮಲ್ಲೇಶ್ವರಂ 8ನೇ ಕ್ರಾಸ್:ಮಾರ್ಗೋಸಾ 8ನೇ ಅಡ್ಡ ರಸ್ತೆಯಿಂದ ಚಂದೂಸ್ ಹೋಟೆಲ್‌ವರೆಗೆ.

ಮಲ್ಲೇಶ್ವರಂ 15ನೇ ಅಡ್ಡರಸ್ತೆ:ಸಂಪಿಗೆ 4ನೇ ಮುಖ್ಯರಸ್ತೆ 15ನೇ ಅಡ್ಡ ರಸ್ತೆ ಜಂಕ್ಷನ್‌ನಿಂದ 15ನೇ ಕ್ರಾಸ್ 2ನೇ ಟೆಂಪಲ್ ಸ್ಟ್ರೀಟ್ ಜಂಕ್ಷನ್‌ವರೆಗೆ.

ಮಲ್ಲೇಶ್ವರಂ 4ನೇ ಮುಖ್ಯರಸ್ತೆ :ಸಂಪಿಗೆ 4ನೇ ಮುಖ್ಯ ರಸ್ತೆ 15ನೇ ಅಡ್ಡ ರಸ್ತೆಯಿಂದ 4ನೇ ಮುಖ್ಯರಸ್ತೆ 18ನೇ ಅಡ್ಡರಸ್ತೆ ಜಂಕ್ಷನ್‌ವರೆಗೆ.

2ನೇ ಟೆಂಪಲ್ ಸ್ಟ್ರೀಟ್ ರಸ್ತೆ:ಸಂಪಿಗೆ ರಸ್ತೆಯ 15ನೇ ಕ್ರಾಸ್ 2ನೇ ಟೆಂಪಲ್ ಜಂಕ್ಷನ್‌ನಿಂದ 2ನೇ ಟೆಂಪಲ್ ಸ್ಟ್ರೀಟ್ ಜಂಕ್ಷನ್ 11ನೇ ಅಡ್ಡರಸ್ತೆ ಜಂಕ್ಷನ್‌ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಓದಿ:ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆ ಸ್ವೀಕರಿಸಿದ ಬಿಜೆಪಿ ಶಾಸಕ!

Last Updated : May 2, 2022, 6:50 PM IST

ABOUT THE AUTHOR

...view details