ಮಹದೇವಪುರ: ಎರಡನೇ ಹಂತದ ಚುನಾವಣಾ ಕಣ ರಂಗೇರಿದ್ದು ಕೇಲ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆ ಕಣ್ಣೂರು ಪಂಚಾಯತಿ ವ್ಯಾಪ್ತಿಯಲ್ಲಿ ಶಿವಶಂಕರ್ ಮತ್ತು ಸುಂದರ್ ಎಂಬುವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೆ ಆವಲಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ವಿರೇನಹಳ್ಳಿ ಗ್ರಾಮದ ಕೃಷ್ಣ, ಆವಲಹಳ್ಳಿ ರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಚುನಾವಣೆಗೆ ಎಂಟು ದಿನಗಳ ಕಾಲಾವಧಿಯಿದ್ದು ಉಳಿದ ಅಭ್ಯರ್ಥಿಗಳ ಗೆಲುವಿಗೆ ಉಭಯ ಪಕ್ಷಗಳ ಕಾರ್ಯಕರ್ತರು ಟೊಂಕ ಕಟ್ಟಿ ನಿಂತಿದ್ದಾರೆ.