ದೇವನಹಳ್ಳಿ: ಹೊಟ್ಟೆಯಲ್ಲಿ 7 ಕೋಟಿ ಮೌಲ್ಯದ 1 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಉಗಾಂಡಾ ದೇಶದ ವ್ಯಕ್ತಿಯನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಶಾರ್ಜಾದಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 32 ವರ್ಷದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನನ್ನು ಆಸ್ಪತ್ರೆಗೆ ದಾಖಲಿಸಿ ಆತನ ಹೊಟ್ಟೆಯಿಂದ 3 ದಿನಗಳ ಅವಧಿಯಲ್ಲಿ 79 ಕ್ಯಾಪ್ಸುಲ್ ಹೊರಗೆ ತೆಗೆಯಲಾಗಿದೆ
ಹೊಟ್ಟೆಯಲ್ಲಿ 7 ಕೋಟಿ ಮೌಲ್ಯದ ಹೆರಾಯಿನ್ ಹೆರಾಯಿನ್ ತುಂಬಿದ ಕ್ಯಾಪ್ಸುಲ್ಗಳನ್ನು ನುಂಗಿ ಆತ ಸ್ಮಗ್ಲಿಂಗ್ ಮಾಡುತ್ತಿದ್ದ. 7 ಕೋಟಿ ಮೌಲ್ಯದ 1 ಕೆಜಿ ಹೆರಾಯಿನ್ ವಶಕ್ಕೆ ಪಡೆದು ಆತನ ವಿರುದ್ಧ ಎನ್ಡಿಪಿಎಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಟ್ಟೆಯಲ್ಲಿ ಮಾದಕ ದ್ರವ್ಯ ಸಾಗಿಸುವಾಗ ಸಿಕ್ಕಿಬಿದ್ದ ಮೊದಲ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್!