ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಕ್ಯಾಬ್​ ಚಾಲಕನಿಗೆ ಥಳಿಸಿದ ಉಗಾಂಡ ಪ್ರಜೆಗಳು.. ಖಾಸಗಿ ಹೋಟೆಲ್​ನಲ್ಲೂ ಕಿರಿಕ್

ಉಗಾಂಡ ಪ್ರಜೆಗಳ ಕಿರಿಕ್​​ ಮುಂದುವರೆದಿದೆ. ನಿನ್ನೆ ತಡರಾತ್ರಿ ಕ್ಯಾಬ್ ಚಾಲಕನಿಗೆ ಚಪ್ಪಲಿ ತೋರಿಸಿ, ಅವಾಚ್ಯ ಪದಗಳಿಂದ ನಿಂದಿಸಿ, ಬಳಿಕ ತಮ್ಮ ಅಂಗಾಂಗ ತೋರಿಸಿ ಖಾಸಗಿ ಹೋಟೆಲ್​ವೊಂದರಲ್ಲಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.

Uganda citizens create new sense
ಉಂಗಾಂಡ ಪ್ರಜೆಗಳ ಕಿರಿಕ್​​

By

Published : Sep 19, 2021, 9:25 AM IST

Updated : Sep 19, 2021, 1:52 PM IST

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಉಗಾಂಡ ಪ್ರಜೆಗಳ ಅಟ್ಟಹಾಸ ನಿಲ್ಲುವಂತೆ ಕಾಣುತ್ತಿಲ್ಲ. ಉಗಾಂಡ ಪ್ರಜೆ(ವಿದ್ಯಾರ್ಥಿನಿಯರು)ಗಳು ಕ್ಯಾಬ್ ಚಾಲಕನಿಗೆ ಚಪ್ಪಲಿ ತೋರಿಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಬಳಿಕ ತಮ್ಮ ಅಂಗಾಂಗ ತೋರಿಸಿ ಖಾಸಗಿ ಹೋಟೆಲ್​ನಲ್ಲಿ ವಿಕೃತಿ ಮೆರೆದಿರುವ ಆರೋಪ ಕೇಳಿಬಂದಿದೆ.

ಬೆಂಗಳೂರಲ್ಲಿ ಕ್ಯಾಬ್​ ಚಾಲಕನಿಗೆ ಥಳಿಸಿದ ಉಗಾಂಡ ಪ್ರಜೆಗಳು

ಆಕ್ರೋಶಕ್ಕೆ ಕಾರಣವಾಯ್ತು ಅಂಗಾಂಗ ಪ್ರದರ್ಶನ:

ನಗರದ ಜೆಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಉಗಾಂಡ ಪ್ರಜೆಗಳು ಅಟ್ಟಹಾಸ ಮೆರೆದಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಕ್ಯಾಬ್ ಚಾಲಕರ ಜೊತೆಗೆ ಮಾತಿನ ಚಕಮಕಿ ನಡೆಸಿ, ಚಪ್ಪಲಿ ಹಿಡಿದು ಥಳಿಸಲು ಮುಂದಾಗಿದ್ದರು. ಇಷ್ಟೇ ಅಲ್ಲದೇ ಆಫ್ರಿಕಾ ಮೂಲದ ಮಹಿಳೆ ತನ್ನ ಅಂಗಾಂಗ ತೋರಿಸಿ ವಿಕೃತಿ ಕೂಡ ಮೆರೆದಿರುವುದು ಕೆಂಗಣ್ಣಿಗೆ ಗುರಿಯಾಗಿದೆ.

ಕ್ಯಾಬ್ ಚಾಲಕನ ಜೊತೆಗೆ ಕಿರಿಕ್:

ಕಾಲೇಜೊಂದರ ಕಾರ್ಯಕ್ರಮದ ನಿಮಿತ್ತ ರಾಜಾಜಿನಗರ ಪ್ರತಿಷ್ಠಿತ ಹೋಟೆಲ್​ನಲ್ಲಿ ಶನಿವಾರ ರಾತ್ರಿ ಇವರೆಲ್ಲ ಸೇರಿದ್ದರು. ರಾತ್ರಿ 10 ಗಂಟೆಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಡ್ಯೂಟಿ ಕನ್ಫರ್ಮ್ ಮಾಡಿಕೊಂಡು ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಸಾಗರ್ ಎನ್ನುವರು ಪ್ಯಾಸೆಂಜರ್ ಬಳಿ ಓಟಿಪಿ ಪಡೆದು ಚಾಲನೆ ಪ್ರಾರಂಭಿಸಿದ್ದಾರೆ.

ಸ್ವಲ್ಪ ದೂರ ಕ್ಯಾಬ್ ಚಲಾಯಿಸಿದ್ದ ಡ್ರೈವರ್​ ಕಾರಿನಲ್ಲಿ ಅಲ್ಲಿವರೆಗೆ ಕೇವಲ ನಾಲ್ಕು ಜನರು ಮಾತ್ರ ಇದ್ದರು. ಏಕಾಏಕಿ ಮತ್ತೊಬ್ಬ ಕ್ಯಾಬ್​ನೊಳಗೆ ಸೇರಿಕೊಳ್ಳಲು ಮುಂದಾಗಿದ್ದಾನೆ. ಹೀಗಾಗುತ್ತಿದ್ದಂತೆ ಕ್ಯಾಬ್ ಚಾಲಕ ಐದು ಜನರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಕೇವಲ ನಾಲ್ಕು ಜನರು ಮಾತ್ರ ಕಾರಿನಲ್ಲಿ ಬನ್ನಿ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಟ್ರಿಪ್ ಕ್ಯಾನ್ಸಲ್ ಮಾಡಿ ಕ್ಯಾನ್ಸಲೇಷನ್ ಚಾರ್ಜ್ ಎಂದು 100 ರೂಪಾಯಿ ಬಿಲ್ ಬಂದಾಗ ಅದನ್ನು ಕೇಳಲು ಚಾಲಕ ಮುಂದಾಗಿದ್ದ. ಈ ವಿಷಯಕ್ಕೆ ರಂಪಾಟ ನಡೆಸಿದ್ದಾರೆ. ಉಗಾಂಡ ಯುವತಿಯರು ಕ್ಯಾಬ್ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದರು ಎನ್ನಲಾಗುತ್ತಿದೆ.

ಹಲ್ಲೆಗೊಳಗಾದ ಚಾಲಕನ ಸ್ನೇಹಿತ ಶ್ರೀಕಾಂತ್ ಹೇಳಿಕೆ:

ಈ ಬಗ್ಗೆ 'ಈಟಿವಿ ಭಾರತ'ವು ಹೆಲ್ಲೆಗೊಳಗಾದ ಚಾಲಕ ಸಾಗರ ಸ್ನೇಹಿತ ಶ್ರೀಕಾಂತ್ ಎನ್ನುವವರನ್ನು ಸಂಪರ್ಕಿಸಿದಾಗ ಅವರು ಕೆಲ ಮಾಹಿತಿ ನೀಡಿದ್ದಾರೆ. ಕಿರಿಕ್ ನಂತರ ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದರು. ನನ್ನ ಸ್ನೇಹಿತನನ್ನು ಮನಬಂದಂತೆ ಎಳೆದಾಡಿದ್ದಾರೆ. ಯುವತಿಯರು ಚಪ್ಪಲಿಯಿಂದ ಥಳಿಸಿದ್ದಾರೆ. ನಾನು ಸೇರಿ ಕ್ಯಾಬ್ ಚಾಲಕನ ಸ್ನೇಹಿತರೆಲ್ಲ ಸ್ಥಳಕ್ಕೆ ಹೋಗಿದ್ದೆವು. ಇಷ್ಟೆಲ್ಲ ಆಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಇಲ್ಲದಿದ್ದರೆ ಏನಾಗುತ್ತಿತ್ತೋ ಎಂದು ಆತಂಕ ಹೊರ ಹಾಕಿದ್ದಾರೆ.

ಓರ್ವ ವಶಕ್ಕೆ:

ಸದ್ಯ ಘಟನೆಗೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿರಿಕ್ ಮಾಡಿದ್ದ ಉಗಾಂಡ ಪ್ರಜೆ ಮತ್ತು ಪ್ರಮುಖ ಆರೋಪಿ ಲುಬೆಗಾ ರೇಮಂಡ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ‌.

ಕಿರಿಕ್​​ ನಡೆಸಿದ ಆಫ್ರಿಕನ್ ಪ್ರಜೆಗಳ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸರು ಎನ್.ಸಿ.ಆರ್ ದಾಖಲಿಸಿದ್ದಾರೆ. ವಶಕ್ಕೆ ಪಡೆದಿದ್ದ ವ್ಯಕ್ತಿ ಸೇರಿ ಗಲಾಟೆಯಲ್ಲಿ ನಿರತರಾಗಿದ್ದ ಮಹಿಳೆಯರಿಂದ ಕ್ಷಮೆ ಯಾಚನೆಯ ಪತ್ರ ಬರೆಸಿಕೊಂಡಿದ್ದಾರೆ. ಚಾಲಕನಿಗೆ ಕ್ಷಮೆಯಾಚಿಸಿ ಇನ್ನು ಎಂದೂ ದುರ್ವರ್ತನೆ ತೋರುವುದಿಲ್ಲವೆಂದು ಬರೆದುಕೊಟ್ಟಿದ್ದಾರೆ. ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಎಲ್ಲರನ್ನೂ ಬಿಟ್ಟು ಕಳುಹಿಸಿದ್ದಾರೆ.

Last Updated : Sep 19, 2021, 1:52 PM IST

ABOUT THE AUTHOR

...view details