ದೇವನಹಳ್ಳಿ: 2022ರ 19 ವರ್ಷದೊಳಗಿನ ವಿಶ್ವಕಪ್ ಗೆದ್ದ ಭಾರತೀಯ ಕಿರಿಯರ ತಂಡ ಮಂಗಳವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಎಲ್ಲ ಆಟಗಾರರು ನಗರದ ತಾಜ್ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದು, ಇಂದು ರಾತ್ರಿ ಅಹಮದಾಬಾದ್ಗೆ ಆಟಗಾರರು ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ವೆಸ್ಟ್ ಇಂಡೀಸ್ನಲ್ಲಿ ನಡೆದ 1ಕಿರಿಯರ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಯುವ ತಂಡವನ್ನು 4 ವಿಕೆಟ್ಗಳಿಂದ ಮಣಿಸುವ ಮೂಲಕ ವಿಶ್ವದಾಖಲೆಯ 5ನೇ ಟ್ರೋಫಿಗೆ ಭಾರತ ಮುತ್ತಿಕ್ಕಿತ್ತು. ಈ ಹಿಂದೆ ಭಾರತ 2000, 2008, 2012, 2018ರಲ್ಲಿ ವಿಶ್ವಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
ಮಂಗಳವಾರ ಟ್ರೋಫಿಯೊಂದಿಗೆ ಯಶ್ ಧುಲ್ ಪಡೆ ತವರಿಗೆ ವಾಪಸ್ ಆಗಿದೆ. ವೆಸ್ಟ್ ಇಂಡೀಸ್ನಿಂದ ದುಬೈ ಮಾರ್ಗವಾಗಿ ಟೀಮ್ ಇಂಡಿಯಾ ಆಟಗಾರರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದ ಬಳಿಯಿರುವ ತಾಜ್ ಹೋಟೆಲ್‌ನಲ್ಲಿ ಇಂದು ವಿಶ್ರಾಂತಿ ಪಡೆಯಲಿದ್ದು, ಬುಧವಾರ ಬಿಸಿಸಿಐ ವಿಶ್ವಕಪ್ ಗೆದ್ದ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದರಿಂದ ಇಂದು ಸಂಜೆ ಅಹಮದಾಬಾದ್ಗೆ ಪ್ರಯಾಣ ಬೆಳೆಸಲಿದ್ದಾರೆ.