ನೆಲಮಂಗಲ (ಬೆಂಗಳೂರು): ಬೆಂಗಳೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಟಾಟಾ ಸುಮೋ ಟೈರ್ ಸ್ಫೋಟಗೊಂಡು, ಪಲ್ಟಿ ಹೊಡೆದ ಪರಿಣಾಮ ತಾತ, ಮೊಮ್ಮಗ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಫ್ಲೈ ಓವರ್ನಲ್ಲಿ ಈ ಘಟನೆ ನಡೆದಿದೆ.
ಟೈರ್ ಸ್ಫೋಟಗೊಂಡು ಟಾಟಾ ಸುಮೋ ಪಲ್ಟಿ: ನೆಲಮಂಗಲದಲ್ಲಿ ತಾತ, ಮೊಮ್ಮಗ ಸಾವು - Tyre burst of Tata Sumo
ಟಾಟಾ ಸುಮೋ ಬೆಂಗಳೂರಿನಿಂದ ಕೊಪ್ಪಳಕ್ಕೆ ತೆರಳುತ್ತಿತ್ತು. ದಾಬಸ್ ಪೇಟೆ ಫ್ಲೈಓವರ್ ಮೇಲೆ ಬಂದಾಗ ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎನ್ನಲಾಗ್ತಿದೆ.
ನೆಲಮಂಗಲ
ಮೊಹಮ್ಮದ್ ಸಾಬ್ (65) ಹಾಗು ಯೂಸುಫ್ (7) ಮೃತ ದುರ್ದೈವಿಗಳು. ಈ ಘಟನೆಯಲ್ಲಿ 13 ಜನರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ:ಬೇಟೆಯಾಡಿದ್ದ ಜಿಂಕೆ ಮಾಂಸ ಒಣಗಿಸಿ ಸಾಗಾಟ: ಓರ್ವನ ಬಂಧನ, ಮತ್ತೋರ್ವ ಪರಾರಿ