ಬೆಂಗಳೂರು :ಮಹಾನಗರದ 2 ವಾರ್ಡ್‌ಗಳಲ್ಲಿ ಕ್ಲಾಕ್‌ಡೌನ್ (ಸೀಲ್‌ಡೌನ್) ಘೋಷಣೆಯ ನಂತರ ನಗರ ಇತರೆ ಭಾಗಗಳಲ್ಲಿ ಕೂಡ ಪೊಲೀಸ್ ತಪಾಸಣೆ ಇನ್ನಷ್ಟು ಬಿಗಿಗೊಂಡಿದೆ. ಕಳೆದ ಒಂದು ವಾರದಿಂದ ಲಾಠಿ ಬಳಕೆ ಬಿಟ್ಟಿದ್ದ ಪೊಲೀಸರು ಕೆಲವೆಡೆ ಅನಗತ್ಯ ಓಡಾಡುವವರನ್ನು ನಿಯಂತ್ರಿಸಲು ಮರಳಿ ಲಾಠಿಯನ್ನು ಕೈಗೆತ್ತಿಕೊಂಡಿದ್ದಾರೆ.
ಸೀಲ್‌ಡೌನ್‌ಗೆ ಒಳಗಾದ ಬಾಪೂಜಿನಗರ ಹಾಗೂ ಪಾದರಾಯನಪುರ ವಾರ್ಡ್ ವ್ಯಾಪ್ತಿಯಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ರೆ, ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತರೆ ಭಾಗಗಳಲ್ಲಿ ಕೂಡ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲ ಪಡಿಸಲಾಗಿದೆ.
ಪಾಸ್ ಇದ್ದರೆ ಮಾತ್ರ ಸಂಚಾರ :ಅಲ್ಲಲ್ಲಿ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ತಪಾಸಣೆ ನಡೆಸುತ್ತಿದ್ದ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಪಾಸ್ ಹೊಂದಿದ್ದರೆ ಮಾತ್ರ ಮುಂದಕ್ಕೆ ತೆರಳಲು ಅವಕಾಶ ನೀಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಆದೇಶ ನೀಡಿದ್ದಾರೆ.
ಸಿಲಿಕಾನ್ ಸಿಟಿಯ ಎರಡು ವಾರ್ಡ್ ಸೀಲ್‌ಡೌನ್.. ಸಿವಿಲ್ ಡಿಫೆನ್ಸ್ ಸಾಥ್ :ಸಹಕಾರನಗರದಲ್ಲಿತಪಾಸಣೆಗೆ ಮುಂದಾಗಿರುವ ಪೊಲೀಸರಿಗೆ ಸಿವಿಲ್ ಡಿಫೆನ್ಸ್‌ನ ಒಬ್ಬ ಹಿರಿಯ ಅಧಿಕಾರಿ ಹಾಗೂ 4-5 ಸಿಬ್ಬಂದಿ ಪೊಲೀಸರ ಜೊತೆಗಿದ್ದು, ತಪಾಸಣೆಗೆ ಸಹಕಾರ ನೀಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ತಪಾಸಣೆ ಅತ್ಯಂತ ಬಿಗಿಗೊಂಡಿದೆ. ಅನಗತ್ಯವಾಗಿ ರಸ್ತೆಯ ಮೇಲೆ ಓಡಾಡುತ್ತಿದ್ದ 12,000ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಪ್ರಧಾನಿ ಜೊತೆ ಸಿಎಂ ಮಾತುಕತೆ :ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಲಭಿಸಿದ ಸೂಚನೆ ಹಿನ್ನೆಲೆ ನಗರದಲ್ಲಿ ಪೊಲೀಸ್ ವ್ಯವಸ್ಥೆ ಇನ್ನಷ್ಟು ಬಿಗಿಗೊಳ್ಳುವ ಸೂಚನೆ ಇದೆ. ನಗರದ ವಿವಿಧ ಭಾಗಗಳನ್ನು ರೆಡ್ ಝೋನ್ ಎಂದು ಗುರುತಿಸಿ ಬಂದೋಬಸ್ತ್ ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ನಗರದಲ್ಲಿ ಕೊರೊನಾ ಇನ್ನಷ್ಟು ವ್ಯಾಪಿಸದಂತೆ ತಡೆಯಲು ಕಟ್ಟುನಿಟ್ಟಿನ ನಿಯಮಗಳು ಅನಿವಾರ್ಯ. ಇದೇ ವಿಚಾರವಾಗಿ ನಗರದ ಪೊಲೀಸ್ ಆಯುಕ್ತರ ಜೊತೆ ಸಿಎಂ ಎರಡು ಮೂರು ಹಂತಗಳಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇಲ್ಲಿ ಕೈಗೊಂಡ ನಿರ್ಧಾರ ರಸ್ತೆಯಲ್ಲಿ ಆಚರಣೆಗೆ ಬರುತ್ತಿದೆ.
ಸಿವಿಲ್ ಡಿಫೆನ್ಸ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಜನ ಸಾಧ್ಯವಾದಷ್ಟು ಮನೆಯಲ್ಲೇ ಇರುವುದಕ್ಕೆ ಆದ್ಯತೆ ಕೊಡಬೇಕು. ಇಷ್ಟು ದಿನ ಇದನ್ನ ಜನರ ವಿವೇಚನೆಗೆ ಬಿಟ್ಟಿದ್ದೆವು. ಆದರೆ, ಹೆಚ್ಚಿನವರು ಇದಕ್ಕೆ ಬೆಲೆಕೊಡದ ಹಿನ್ನೆಲೆ ಅನಿವಾರ್ಯವಾಗಿ ಪೊಲೀಸ್ ವ್ಯವಸ್ಥೆ ಬಿಗಿಗೊಳಿಸಬೇಕಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದರು.