ಕರ್ನಾಟಕ

karnataka

ETV Bharat / city

ಸಾರಿಗೆ ನೌಕರರ ಮುಷ್ಕರ: ನಾಳೆ ರಸ್ತೆಗಿಳಿಯಲಿವೆ 2 ಸಾವಿರ ಹೆಚ್ಚುವರಿ ಖಾಸಗಿ ಬಸ್‌ಗಳು - ರಾಜ್ಯ ಖಾಸಗಿ ಬಸ್ ಸ್ಟೇಜ್ ಕ್ಯಾರಿಯೇಜ್ ಫೆಡರೇಷನ್

ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ 2 ಸಾವಿರ ಹೆಚ್ಚುವರಿ ಖಾಸಗಿ‌ ಬಸ್‌ಗಳು ಕಾರ್ಯನಿರ್ವಹಿಸಲಿವೆ ಎಂದು ರಾಜ್ಯ ಖಾಸಗಿ ಬಸ್ ಸ್ಟೇಜ್ ಕ್ಯಾರಿಯೇಜ್ ಫೆಡರೇಷನ್ ಉಪಾಧ್ಯಕ್ಷ ಕೆ.ಕೆ.ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

2000 extra private buses will be on the road tomorrow
ನಾಳೆ ರಸ್ತೆಗಿಳಿಯಲಿವೆ 2 ಸಾವಿರ ಹೆಚ್ಚುವರಿ ಖಾಸಗಿ ಬಸ್‌ಗಳು

By

Published : Apr 6, 2021, 2:39 PM IST

ಬೆಂಗಳೂರು: ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ 2 ಸಾವಿರ ಹೆಚ್ಚುವರಿ ಖಾಸಗಿ‌ ಬಸ್‌ಗಳು ಕಾರ್ಯನಿರ್ವಹಿಸಲಿವೆ.

ಒಟ್ಟು 9 ಸಾವಿರ ಸ್ಟೇಜ್ ಕ್ಯಾರಿಯರ್ ಖಾಸಗಿ ಬಸ್​​ಗಳಿದ್ದು, ಈ ಪೈಕಿ 7 ಸಾವಿರ ಬಸ್‌ಗಳು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ಉಳಿದ 2,000 ಸಾವಿರ ಬಸ್​ಗಳನ್ನು ನಾಳೆಯಿಂದ ಹಂತ ಹಂತವಾಗಿ ಬೇಡಿಕೆಗನುಗುಣವಾಗಿ ರಸ್ತೆಗಿಳಿಸುವುದಾಗಿ ರಾಜ್ಯ ಖಾಸಗಿ ಬಸ್ ಸ್ಟೇಜ್ ಕ್ಯಾರಿಯೇಜ್ ಫೆಡರೇಷನ್ ಉಪಾಧ್ಯಕ್ಷ ಕೆ.ಕೆ.ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಜಿಲ್ಲೆಗಳಲ್ಲಿ ಸಭೆ ಮಾಡಿ ಮನವಿ ಮಾಡಿದ್ದಾರೆ. ಹೀಗಾಗಿ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಂಡ್ಯ, ಮಡಿಕೇರಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ, ಕೋಲಾರ ಸೇರಿ 14 ಜಿಲ್ಲೆಗಳಲ್ಲಿ ಹೆಚ್ಚುವರಿ ಖಾಸಗಿ ಬಸ್‌ಗಳು ಸಂಚಾರ ನಡೆಸಲಿವೆ.‌ ಜೊತೆಗೆ ಬಸ್ ದರದಲ್ಲಿ ಹೆಚ್ಚಳ ಇರಿವುದಿಲ್ಲ. ಈಗಿರೋ ದರದಲ್ಲೇ ಸೇವೆ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.

ಓದಿ:‘6ನೇ ವೇತನ ಆಯೋಗ ಜಾರಿಯಿಲ್ಲ, ಸಂಧಾನವೂ ಇಲ್ಲ; ಮುಷ್ಕರ ನಡೆಸಿದ್ರೆ ಕಠಿಣ ಕ್ರಮ’

ABOUT THE AUTHOR

...view details