ಕರ್ನಾಟಕ

karnataka

ETV Bharat / city

ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು - Two students who went swimming were waterproof

ಬಿಸಿಲಿನ ಝಳ ಹೆಚ್ಚಾದ ಹಿನ್ನೆಲೆ ಈಜಲೆಂದು ಕೆರೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಆನೇಕಲ್ ತಾಲೂಕಿನ ಮುಗಳೂರಿನಲ್ಲಿ ಕಂಡು ಬಂದಿದೆ.

Two student
Two student

By

Published : Apr 1, 2021, 12:27 PM IST

ಆನೇಕಲ್: ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಆನೇಕಲ್ ತಾಲೂಕಿನ ಮುಗಳೂರು ಕೆರೆಯಲ್ಲಿ ನಡೆದಿದೆ.

ಬಳ್ಳಾರಿ ಮೂಲದ ಶಿವು (12), ಮಾದನಾಯಕನಹಳ್ಳಿ ಗ್ರಾಮದ ಕಾರ್ತಿಕ್(12) ಸಾವನ್ನಪ್ಪಿದ ವಿದ್ಯಾರ್ಥಿಗಳು. ಇವರು ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಬಿಸಿಲಿನ ಝಳಕ್ಕೆ ನಿನ್ನೆ ಇಬ್ಬರು ವಿದ್ಯಾರ್ಥಿಗಳು ಯಾರಿಗೂ ತಿಳಿಸದೇ ಈಜಲೆಂದು ಕೆರೆಗೆ ಹೋಗಿದ್ದರು. ಕತ್ತಲಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದಾಗ ಈಜಲು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ನಂತರ ಕೆರೆಯ ಸುತ್ತ ಪರಿಶೀಲಿಸಿದಾಗ ಮಕ್ಕಳ ಬಟ್ಟೆಗಳು ಕಂಡು ಬಂದಿದ್ದು, ಅಗ್ನಿಶಾಮಕ ದಳ ಮತ್ತು ಸರ್ಜಾಪುರ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ.

ABOUT THE AUTHOR

...view details