ಬೆಂಗಳೂರು:ಮಾರಕ ಕೊರೊನಾ ಸೋಂಕಿಗೆ ಎಎಸ್‌ಐ ಮತ್ತು ಹೆಡ್ ಕಾನ್ಸ್ಸ್ಟೇಬಲ್ ಬಲಿಯಾಗಿದ್ದಾರೆ.
ಕಿಲ್ಲರ್ ಕೊರೊನಾಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಬಲಿ - Two police officers died from Corona virus
ಬೆಂಗಳೂರಿನ ವೈಟ್ ಫೀಲ್ಡ್ ಠಾಣೆಯ ಹೆಡ್ ಕಾನ್ಸ್ಸ್ಟೇಬಲ್ ಹಾಗೂ ಎಎಸ್‌ಐ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಿಲ್ಲರ್ ಕೊರೊನಾಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಬಲಿ
ನಗರದ ವೈಟ್ ಫೀಲ್ಡ್ ಠಾಣೆಯ ಹೆಡ್ ಹೆಡ್ ಕಾನ್ಸ್ಸ್ಟೇಬಲ್ ಹಾಗೂ ಎಎಸ್‌ಐ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಎಎಸ್‌ಐ ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅವರ ವೈದ್ಯಕೀಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯ ನಾಲ್ವರು ಕೊರೊನಾ ಬಲಿಯಾಗಿದ್ದಾರೆ.