ಬೆಂಗಳೂರು:ಸುಪ್ರೀಂಕೋರ್ಟ್ ಆದೇಶದ ಅನ್ವಯ ಒಕ್ಕೂಟ ಸರ್ಕಾರ ರಾಜ್ಯಕ್ಕೆ ಭಿನ್ನ ಸಮಯದಲ್ಲಿ ಎರಡು ರೈಲುಗಳ ಮೂಲಕ ಆಮ್ಲಜನಕ ರವಾನಿಸಿದೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಜನ ಪ್ರಾಣಬಿಟ್ಟಿ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶದಂತೆ ಎರಡು ದಿನದ ಹಿಂದೆಯಷ್ಟೇ ಮೊದಲ ಬ್ಯಾಚ್ನ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಬಂದಿತ್ತು. ಎರಡನೇ ಹಂತದಲ್ಲಿ ರಾಜ್ಯಕ್ಕೆ ಎರಡು ರೈಲುಗಳಲ್ಲಿ ಆಮ್ಲಜನಕ ಪೂರೈಕೆಯಾಗಿದೆ.
ರಾಜ್ಯಕ್ಕೆ 240 ಟನ್ ಪ್ರಾಣವಾಯು ಹೊತ್ತ ತಂದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು..! ಓಡಿಶಾದ ಕಳಿಂಗ ನಗರದಿಂದ ಗುರುವಾರ ಮಧ್ಯಾಹ್ನ 3.10ಕ್ಕೆ ಹೊರಟಿ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು 120 ಟನ್ ಆಕ್ಸಿಜನ್ ಹೊತ್ತು ಬೆಳಗ್ಗೆ ಗಂಟೆಗೆ ಹಾಗೂ ಮತ್ತೊಂದು ರೈಲು ಟಾಟಾ ನಗರದಿಂದ ಪ್ರಯಾಣ ಆರಂಭಿಸಿ ಸಂಜೆ 5:30ಕ್ಕೆ ಬೆಂಗಳೂರು ತಲುಪಿದೆ.
ಆಕ್ಸಿಜನ್ ಎಕ್ಸ್‌ಪ್ರೆಸ್‌ನ ತ್ವರಿತ ಸಾಗಣೆ ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಮೂಲಕ ಸಾಗಣೆ ಮಾಡಲಾಗುತ್ತಿದೆ. ಎರಡು ರೈಲುಗಳಿಂದ 6 ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ ಆಕ್ಸಿಜನ್ ತುಂಬಲಾಗಿತ್ತು. ಪ್ರತಿ ಕ್ರಯೋಜೆನಿಕ್ ಕಂಟೇನರ್‌ನಲ್ಲಿ 20 ಟನ್ ವೈದ್ಯಕೀಯ ಆಮ್ಲಜನಕ ಸಾಗಿಸಲಾಗಿದ್ದು, ಒಟ್ಟು 240 ಟನ್ ಪ್ರಾಣವಾಯು ಬಂದಂತಾಗಿದೆ. ಇಲ್ಲಿಯವರೆಗೆ ಒಕ್ಕೂಟ ಸರ್ಕಾರ ರಾಜ್ಯಕ್ಕೆ 360 ಟನ್ ವೈದ್ಯಕೀಯ ಆಮ್ಲಜನಕ ರೈಲು ಮೂಲಕ ಪೂರೈಸಿದೆ.