ಕರ್ನಾಟಕ

karnataka

'ಬಹುರೂಪಿ ಪ್ರಕಾಶನ'ಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಗರಿ

By

Published : Mar 30, 2022, 10:44 PM IST

ಬಹುರೂಪಿ ಪ್ರಕಾಶನದ 'ಅಕ್ಕಯ್' ಕೃತಿಗೆ ಪ್ರಕಟಣೆಯ ಉತ್ಕೃಷ್ಟತೆಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ಅರಸಿ ಬಂದಿವೆ.

two-national-award-feathers-for-bahuroopi-publishing
'ಬಹುರೂಪಿ ಪ್ರಕಾಶನ'ಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ

ಬೆಂಗಳೂರು: ಬಹುರೂಪಿ ಪ್ರಕಾಶನದ 'ಅಕ್ಕಯ್' ಕೃತಿಗೆ ಪ್ರಕಟಣೆಯ ಉತ್ಕೃಷ್ಟತೆಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪಬ್ಲಿಷಿಂಗ್ ನೆಕ್ಸ್ಟ್ ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ ಈ ಕೃತಿಯು ಪ್ರಕಟಣೆಯ ಉತ್ಕೃಷ್ಟತೆಗೆ ಹಾಗೂ 'ಕುಪ್ಪಳಿ ಡೈರಿ' ಕೃತಿ ಮುಖಪುಟ ವಿನ್ಯಾಸಕ್ಕಾಗಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ದೇಶ-ವಿದೇಶದ ಪ್ರತಿಷ್ಠಿತ ಪ್ರಕಟಣಾ ಸಂಸ್ಥೆಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಅಂತಿಮವಾಗಿ 'ಅಕ್ಕಯ್' ಕೃತಿ ದ್ವಿತೀಯ ಸ್ಥಾನ ಗಳಿಸಿದೆ.


ದೇಶದ ಸಾರ್ವಜನಿಕ ಸಂಪರ್ಕ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆ 'ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ' (ಪಿ ಆರ್ ಸಿ ಐ) ನಡೆಸುವ ಸಾರ್ವಜನಿಕ ರಂಗದ ವಾರ್ಷಿಕ ಪ್ರಶಸ್ತಿ ಸ್ಪರ್ಧೆಯಲ್ಲಿ ಪುಸ್ತಕ ಪ್ರಕಟಣಾ ವಿಭಾಗದಲ್ಲಿ 'ಅಕ್ಕಯ್' ಕೃತಿ ಬೆಳ್ಳಿ ಪದಕ ಗಳಿಸಿದೆ. ಈ ಕೃತಿಯ ವಿನ್ಯಾಸದ ಹಿಂದೆ ಎಸ್.ಎಂ.ಸಾಗರ್, ಅರುಣ್ ಕುಮಾರ್ ಜಿ, ಛಾಯಾಗ್ರಾಹಕ ಮನುಕುಮಾರ್, ರೀಗಲ್ ಪ್ರಿಂಟರ್ಸ್ ವೆಂಕಟೇಶ್ ಶ್ರಮವಿದೆ. 'ಅಕ್ಕಯ್' ಮೂಲತಃ ಸಾಮಾಜಿಕ ಹೋರಾಟಗಾರರೂ, ಲೈಂಗಿಕ ಅಲ್ಪಸಂಖ್ಯಾತರಾದ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥೆಯಾಗಿದ್ದು ಪ್ರೊ.ಡೊಮಿನಿಕ್ ಡಿ ಅವರು ನಿರೂಪಿಸಿದ್ದಾರೆ.

ಇದನ್ನೂ ಓದಿ:ಶ್ರೀಗಂಧ ಬೆಳೆ ನಷ್ಟ: ಪರಿಹಾರಕ್ಕಾಗಿ ಸರ್ಕಾರಕ್ಕೆ ರಕ್ತದಲ್ಲಿ ಪತ್ರ

TAGGED:

ABOUT THE AUTHOR

...view details