ಬೆಂಗಳೂರು:ಪೊಲೀಸ್ ಇಲಾಖೆಯನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ ಸೋಂಕು, ಇಂದು ಎರಡು ಠಾಣೆಗಳ ಇಬ್ಬರು ಕಾನ್ಸ್ಟೇಬಲ್ಗಳಿಗೆ ಅಂಟಿಕೊಂಡಿದೆ.
ಹಲಸೂರು ಗೇಟ್ ಸಂಚಾರಿ ಠಾಣೆ: ಈ ಠಾಣೆಯ ಸಿಬ್ಬಂದಿಯೊಬ್ಬರಿಗೆ ಈ ಮೊದಲೇ ಸೋಂಕು ದೃಢವಾಗಿತ್ತು. ಅವರ ಸಂಪರ್ಕದಲ್ಲಿದ್ದ ಕಾನ್ಸ್ಟೇಬಲ್ಗೆ ಇಂದು ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತನ ಸಂಪರ್ಕದಲ್ಲಿದ್ದ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ಗೆ ಒಳಪಡಿಸಿ, ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ.
ಹನುಮಂತನಗರ ಠಾಣೆ:ಈ ಠಾಣೆಯಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ. ಈತ ಸೋಂಕಿತರು ದಾಖಲಾಗುವ ಆಸ್ಪತ್ರೆ, ವಿವಿ ಪುರಂ ಠಾಣೆ ಸುತ್ತಮುತ್ತ ಕೆಲಸ ಮಾಡಿದ್ದ. ಹೀಗಾಗಿ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಿ, ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಅನಿವಾರ್ಯ ಕಾರಣಕ್ಕಾಗಿ ಈ ಠಾಣೆಯನ್ನು ಸಂಪರ್ಕಿಸುವವರು ನಗರ ಆಯುಕ್ತರ ಕಚೇರಿಯ 100ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.