ಕರ್ನಾಟಕ

karnataka

ETV Bharat / city

'ನಮ್ಮನ್ನು ಹುಡುಕಬೇಡಿ...' ಪೋಷಕರಿಗೆ ಕರೆ ಮಾಡಿ ವಿದ್ಯಾರ್ಥಿನಿಯರು‌ ನಾಪತ್ತೆ - two students missing in bengaluru

ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಪೋಷಕರಿಗೆ ಕರೆ​ ಮಾಡಿ ನಮ್ಮನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದಾರೆ.

Highgrounds Police station
ಹೈಗ್ರೌಂಡ್ಸ್​ ಪೊಲೀಸ್​ ಠಾಣೆ

By

Published : Jul 28, 2022, 9:53 AM IST

ಬೆಂಗಳೂರು: ನಮ್ಮನ್ನು ಹುಡುಕಬೇಡಿ ಎಂದು ಪೋಷಕರಿಗೆ ಕರೆ ಮಾಡಿ ತಿಳಿಸಿ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ನಾಪತ್ತೆಯಾಗಿರುವ ಪ್ರಕರಣ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದೆ. ಹರ್ಷಿತಾ (19) ಹಾಗೂ ಮರಿಯಾ ವೈಶಾಲಿ (19) ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು.

ನಾಪತ್ತೆಯಾದ ವಿದ್ಯಾರ್ಥಿನಿಯರು

ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹರ್ಷಿತಾ ಜುಲೈ 25ರಂದು ಸಂಜೆ 5 ಗಂಟೆಗೆ ಸ್ನೇಹಿತೆ ಮರಿಯಾ ವೈಶಾಲಿಯನ್ನು ಭೇಟಿಯಾಗಲು ತೆರಳಿದ್ದು ಮನೆಗೆ ಬರುವುದು ವಿಳಂಬವಾಗಿತ್ತು. ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಪೋಷಕರು ಮರಿಯಾ ವೈಶಾಲಿಗೆ ಕರೆ ಮಾಡಿ ವಿಚಾರಿಸಿದಾಗ ವಸಂತನಗರದಲ್ಲಿದ್ದೇವೆ, ಸ್ವಲ್ಪ ಸಮಯದಲ್ಲಿ ಮನೆಗೆ ಬರುತ್ತಿದ್ದೇವೆ ಎಂದಿದ್ದರು.

ಆದರೆ ಸ್ವಲ್ಪ ಸಮಯದಲ್ಲೇ ಮರಿಯಾಳ ಫೋನ್ ಸ್ವಿಚ್ ಆಫ್ ಆದಾಗ ಹರ್ಷಿತಾಳ ಪೋಷಕರು ಮರಿಯಾ ವೈಶಾಲಿಯ ಪೋಷಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಈ ಸಂದರ್ಭದಲ್ಲಿ ಮರಿಯಾ "ನಾವಿನ್ನು ಮನೆಗೆ ಬರಲ್ಲ ಇನ್ನು ಹುಡುಕಬೇಡಿ" ಎಂದು ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಇಬ್ಬರ ಪೋಷಕರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದ ಗೋಡೆ: ಬಾಲಕ ದಾರುಣ ಸಾವು

ABOUT THE AUTHOR

...view details