ಕರ್ನಾಟಕ

karnataka

ETV Bharat / city

ಮಾದಕ ವಸ್ತು ಮಾರಾಟ : ಬೆಂಗಳೂರಿನಲ್ಲಿ ಇಬ್ಬರ ಬಂಧನ - Bangalore

ಪ್ರಕರಣದಲ್ಲಿ ಇತರೆ ಆರೋಪಿಗಳು ಭಾಗಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಸದ್ಯ ಬಂಧಿತ ಆರೋಪಿಗಳಿಂದ ಒಟ್ಟು 12.75 ಲಕ್ಷ ಮೌಲ್ಯದ 280 ಗ್ರಾಂ ಗಾಂಜಾ, 230 ಎಕ್ಸ್‌ಟಸಿ ಮಾತ್ರೆ, 140 ಗ್ರಾಂ ಹ್ಯಾಶ್ ಆಯಿಲ್, 450 ಗ್ರಾಂ ಎಲ್‌ಎಸ್‌ಡಿ ಪೇಪರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

Bangalore
ಬಂಧಿತ ಆರೋಪಿಗಳು

By

Published : Jul 30, 2021, 9:11 PM IST

ಬೆಂಗಳೂರು :ಪಾರ್ಟಿಗಳಿಗೆ ಪೂರೈಕೆ ಮಾಡಲು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿ ಬಿ ಆರ್ ಕೌಶಿಕ್ (25) ಹಾಗೂ ಚಿಕ್ಕಲಸಂದ್ರದ ಎಸ್.ರಂಗನಾಥ್ (21) ಬಂಧಿತರು.

ಕೌಶಿಕ್ ಬಿಎಸ್‌ಸಿ ವ್ಯಾಸಂಗ ಮಾಡಿದ್ದು, ಫ್ರೆಶ್ ಮಾನ್ಯುಯಲ್ ಎಂಬ ಫುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರಂಗನಾಥ್ ಪಿಯುಸಿ ವ್ಯಾಸಂಗ ಮಾಡಿದ್ದು, ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಇವರಿಬ್ಬರು ಸ್ನೇಹಿತರಾಗಿದ್ದಾರೆ.

ಕೌಶಿಕ್ ಈ ಹಿಂದೆ ಕುಮಾರಸ್ವಾಮಿಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಎರಡು ತಿಂಗಳು ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಪುನಃ ಕೃತ್ಯ ಮುಂದುವರೆಸಿ ಸಿಕ್ಕಿ ಬಿದ್ದಿದ್ದಾನೆ. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಾದಕ ವಸ್ತು ಮಾರಾಟ ದಂಧೆಗೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಜಪ್ತಿ ಮಾಡಲಾದ ಕಾರು ಹಾಗೂ ಮಾದಕ ವಸ್ತು

ಲಾಲ್‌ಬಾಗ್ ಸಿದ್ದಾಪುರದ ಕಲ್ಯಾಣಿಯ ಬಳಿ ಕಾರು ನಿಲ್ಲಿಸಿಕೊಂಡು ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್​​ಪೆಕ್ಟರ್ ಎ.ರಾಜು ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದಿಂದ ಮಾದಕ ವಸ್ತುವನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಇತರೆ ಆರೋಪಿಗಳು ಭಾಗಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಸದ್ಯ ಬಂಧಿತ ಆರೋಪಿಗಳಿಂದ ಒಟ್ಟು 12.75 ಲಕ್ಷ ಮೌಲ್ಯದ 280 ಗ್ರಾಂ ಗಾಂಜಾ, 230 ಎಕ್ಸ್‌ಟಸಿ ಮಾತ್ರೆ, 140 ಗ್ರಾಂ ಹ್ಯಾಶ್ ಆಯಿಲ್, 450 ಗ್ರಾಂ ಎಲ್‌ಎಸ್‌ಡಿ ಪೇಪರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details