ದೊಡ್ಡಬಳ್ಳಾಪುರ(ಬೆಂಗಳೂರು) :ಶೀಘ್ರ ಹಣ ಸಂಪಾದಿಸಲು ಅಡ್ಡದಾರಿ ಹಿಡಿದ ಇಬ್ಬರು ಗಾಂಜಾ ವ್ಯಸನಿಗಳು ಲಾರಿ ಡ್ರೈವರ್ಗಳಿಗೆ ಗಾಂಜಾ ಮಾರಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಾರೆ. ಆರೋಪಿಗಳಿಂದ 3 ಕೆಜಿ 100 ಗ್ರಾಂ ಒಣಗಿದ ಗಾಂಜಾ ಸೊಪ್ಪುನ್ನು ವಶಕ್ಕೆ ಪಡೆಯಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಟಾಫೇ ಪ್ಯಾಕ್ಟರಿ ಬಳಿ ಇಬ್ಬರು ಗಾಂಜಾ ಮಾರಾಟ ಮಾಡುವ ಸುಳಿವು ಸಿಕ್ಕ ಹಿನ್ನೆಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸತೀತ್ ಬಿ ಎಸ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸುರೇಂದ್ರ (30) ಹಾಗೂ ಪವನ್ ಕುಮಾರ್ (19) ಎಂಬ ಇಬ್ಬರನ್ನು ಬಂಧಿಸಿ, ಆರೋಪಿಗಳಿಂದ 1 ಕೆಜಿ 800 ಗ್ರಾಂ ಮತ್ತು 1 ಕೆಜಿ 300 ಗ್ರಾಂ ತೂಕದ ಎರಡು ಗಾಂಜಾ ಚೀಲಗನ್ನು ವಶಕ್ಕೆ ಪಡೆಯಲಾಗಿದೆ.