ಬೆಂಗಳೂರು: ಶ್ರೀ ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ವಂಚನೆ ಪ್ರಕರಣದಲ್ಲಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣಪ್ರಸಾದ್‌ನನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿಗಮದ ಡೆಪ್ಯೂಟಿ ಜನರಲ್ ಮ್ಯಾನೇಜರ್ ನಾರಾಯಣ್ ಹೆಗ್ಡೆ ನೀಡಿದ ದೂರಿನನ್ವಯ ಕೆ.ಎನ್. ವೆಂಕಟನಾರಾಯಣ್ ಸೇರಿ ಶ್ರೀ ವಶಿಷ್ಠ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಸಂಬಂಧಿಸಿದ 56 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ವಂಚನೆ: ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪುತ್ರನ ಬಂಧನ! - Vasishtha Credit Co operative Bank
ವಂಚನೆ ಪ್ರಕರಣದಲ್ಲಿ ವಸಿಷ್ಠ ಕ್ರೆಡಿಟ್ ಕೋ - ಆಪರೇಟಿವ್ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
![ವಂಚನೆ: ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪುತ್ರನ ಬಂಧನ! Vasishtha Credit Co operative Bank fraud case](https://etvbharatimages.akamaized.net/etvbharat/prod-images/768-512-14839101-thumbnail-3x2-svdegyf.jpg)
ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ
ಇದನ್ನೂ ಓದಿ:ಜಾಗದ ವಿಚಾರಕ್ಕೆ ಪುರಸಭೆ ಸದಸ್ಯನ ಮೇಲೆ 6 ಜನರಿದ್ದ ಗುಂಪಿಂದ ಮಾರಣಾಂತಿಕ ಹಲ್ಲೆ
ಪ್ರಕರಣ ದಾಖಲಾದ ಬೆನ್ನಲ್ಲೇ ಕೆ.ಎನ್.ವೆಂಕಟನಾರಾಯಣ್ ಹಾಗೂ ಅವರ ಪುತ್ರ ಕೃಷ್ಣಪ್ರಸಾದ್ ನ್ಯಾಯಾಲಯಕ್ಕೆ ಗುರುವಾರ ಹಾಜರಾಗಿ ಶರಣಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಠೇವಣಿದಾರರು ನಿಶ್ಚಿತ ಠೇವಣಿ ಹೂಡಿಕೆ ಮಾಡಿರುವುದನ್ನು ಬ್ಯಾಂಕ್ ಮರುಪಾವತಿ ಮಾಡುತ್ತಿಲ್ಲವೆಂದು ರಾಜ್ಯ ಸೌಹಾರ್ದ ಸಂಯುಕ್ತ ನಿಗಮಕ್ಕೆ ಠೇವಣಿದಾರರು ದೂರು ನೀಡಿದ್ದರು.