ಕರ್ನಾಟಕ

karnataka

ETV Bharat / city

ಕೋವಿಡ್ ಲಸಿಕೆ ಕದ್ದು ಹಣ ಸಂಪಾದನೆ ಮಾಡುತ್ತಿದ್ದ ವೈದ್ಯೆ ಸೇರಿ ಇಬ್ಬರ ಬಂಧನ - ಕೋವಿಶಿಲ್ಡ್ ಲಸಿಕೆ ಕಳ್ಳತನ

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಕೋವಿಶಿಲ್ಡ್ ಲಸಿಕೆಯನ್ನು ಅಕ್ರಮವಾಗಿ ಕಳ್ಳತನ ಮಾಡಿ ಸ್ನೇಹಿತೆ ಪ್ರೇಮಾ ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದಳು. ಕಳೆದ ಏಪ್ರಿಲ್ ನಿಂದ‌ ಈ ಕೃತ್ಯವನ್ನು ನಡೆಸುತ್ತಿದ್ದಾರೆ. ಪ್ರತಿ ದಿನ ಸಂಜೆ ಬೇಕಾದವರಿಗೆ ಮನೆಗೆ ಕರೆಯಿಸಿ ಲಸಿಕೆ ಹಾಕಿ ಒಂದು ಲಸಿಕೆಗೆ 500 ರೂ. ಪಡೆದುಕೊಳ್ಳುತ್ತಿದ್ದರು.

ಇಬ್ಬರ ಬಂಧನ
ಇಬ್ಬರ ಬಂಧನ

By

Published : May 20, 2021, 10:42 PM IST

ಬೆಂಗಳೂರು: ಕೋವಿಡ್ ಲಸಿಕೆ ಕದ್ದು ತಮಗೆ ಬೇಕಾದವರಿಗೆ ವ್ಯಾಕ್ಸಿನೇಷನ್ ಮಾಡಿ ಹಣ ಪಡೆಯುತ್ತಿದ್ದ ವೈದ್ಯೆ ಸೇರಿ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪುಷ್ಟಿತಾ ಹಾಗೂ ಸ್ನೇಹಿತೆ ಪ್ರೇಮಾ ಬಂಧಿತರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ‌ ಆರು ತಿಂಗಳಿಂದ ಗುತ್ತಿಗೆ ಆಧಾರದಲ್ಲಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ‌ ಪುಷ್ಟಿತಾ ಕಾರ್ಯನಿರ್ವಹಿಸುತ್ತಿದ್ದರೆ ಪ್ರೇಮಾ ಗೃಹಿಣಿಯಾಗಿದ್ದಳು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಕೋವಿಶೀಲ್ಡ್ ಲಸಿಕೆಯನ್ನು ಅಕ್ರಮವಾಗಿ ಕಳ್ಳತನ ಮಾಡಿ ಸ್ನೇಹಿತೆ ಪ್ರೇಮಾ ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದಳು. ಕಳೆದ ಏಪ್ರಿಲ್ ನಿಂದ‌ ಈ ಕೃತ್ಯವನ್ನು ನಡೆಸುತ್ತಿದ್ದಾರೆ. ನಿತ್ಯ ಸಂಜೆ ಬೇಕಾದವರಿಗೆ ಮನೆಗೆ ಕರೆಯಿಸಿ ಲಸಿಕೆ ಹಾಕಿ ಒಂದು ಲಸಿಕೆಗೆ 500 ರೂ. ಪಡೆದುಕೊಳ್ಳುತ್ತಿದ್ದರು.

ಮಾಹಿತಿ ಆಧರಿಸಿ ಲಸಿಕೆ ಹಾಕಿಸಿಕೊಳ್ಳುವ ಸೋಗಿನಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ತಗಲಾಕಿಕೊಂಡಿದ್ದಾರೆ. ಪ್ರೇಮಾ ಮನೆಯಲ್ಲಿ ಒಂದು ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸೀರಿಂಜ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದುವರೆಗೂ ನಿಖರವಾಗಿ ಎಷ್ಟು ಲಸಿಕೆ ಕದ್ದಿದ್ದಾರೆ. ಜನರಿಂದ ಎಷ್ಟು ಹಣ ತೆಗೆದುಕೊಂಡಿದ್ದಾರೆ ಎನ್ನುವ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details