ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿದ್ದು, ಸಿಐಡಿ ಇಂದು ಬಂಧಿತ ಆರೋಪಿ ಶ್ರೀಧರ್ ಮನೆಯಲ್ಲಿ ತಪಾಸಣೆ ನಡೆಸಿತು. ಆರೋಪಿ ಶ್ರೀಧರ್ ಮನೆಯಲ್ಲಿ 20 ಲಕ್ಷ ನಗದು ಪತ್ತೆಯಾಗಿದೆ. ನೇಮಕಾತಿ ವಿಭಾಗದ ಪ್ರಥಮ ದರ್ಜೆ ನೌಕರನಾಗಿದ್ದ ಶ್ರೀಧರ್ ಮಧ್ಯವರ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಆತನ ಬಂಧನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
PSI ನೇಮಕಾತಿ ಅಕ್ರಮ: ಆರೋಪಿಯೊಬ್ಬನ ಮನೆಯಲ್ಲಿ 20ಲಕ್ಷ ನಗದು ಪತ್ತೆ! - ಪಿಎಸ್ಐ ಅಕ್ರಮದ ಆರೋಪಿ ಮನೆಯಲ್ಲಿ ಹಣ
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಶ್ರೀಧರ್ ಮನೆಯಲ್ಲಿ 20ಲಕ್ಷ ರೂ. ನಗದು ಪತ್ತೆಯಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ
ಸಿಐಡಿ ತಂಡ ಬಸವೇಶ್ವರ ನಗರ ಶಾರದ ಕಾಲೋನಿಯಲ್ಲಿರುವ ಆರೋಪಿ ಮನೆಗೆ ಇಂದು ಶ್ರೀಧರ್ ನನ್ನು ಕರೆ ತಂದು ಮನೆ ಪರಿಶೀಲನೆ ನಡೆಸಿದೆ. ಈ ವೇಳೆ ನಗದು ಪತ್ತೆಯಾಗಿದ್ದು, ಈ ಸಂಬಂಧ ಶ್ರೀಧರ್ನನ್ನು ಸಿಐಡಿ ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ: ಸಚಿವ ಗೋಪಾಲಯ್ಯ