ಬೆಂಗಳೂರು: ನೀವು ಗಾಂಧಿಯ ಹೆಸರನ್ನಷ್ಟೇ ಮೆತ್ತಿಕೊಂಡು ದೇಶದಲ್ಲೇ ಅವಸಾನವಾಗಿದ್ದೀರಿ. ನಾವು ಗಾಂಧಿ ತತ್ವಗಳನ್ನು ಪಾಲಿಸಿಕೊಂಡು ಜಗತ್ತನ್ನೇ ಗೆಲ್ಲುತ್ತಿದ್ದೇವೆ ಎಂದು ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು ನೀಡಿದೆ.
'ನೀವು ಗಾಂಧಿ ಹೆಸರನ್ನಷ್ಟೇ ಮೆತ್ತಿಕೊಂಡಿದ್ದೀರಿ, ನಾವು ಗಾಂಧಿ ತತ್ವ ಪಾಲಿಸಿ ಜಗ ಗೆಲ್ಲುತ್ತಿದ್ದೇವೆ' - ಗಾಂಧಿ ಹಂತಕನಿಗೆ ಬೆಂಬಲ
ಕಾಂಗ್ರೆಸ್, ಬಿಜೆಪಿ ಮಧ್ಯೆ ಮುಂದುವರಿದ ಆರೋಪ-ಪ್ರತ್ಯಾರೋಪ. ಬಿಜೆಪಿಯು ಗಾಂಧಿ ಹಂತಕನ ಬೆಂಬಲಕ್ಕಿದೆ ಎಂದು ಅನಿಸುವುದಿಲ್ಲವೇ ಎಂದ ಕಾಂಗ್ರೆಸ್ಗೆ ಬಿಜೆಪಿ ಟಾಂಗ್ ನೀಡಿದೆ.
ಭಯೋತ್ಪಾದನೆ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರು ಗೋಡ್ಸೆಯನ್ನು ದೇಶಭಕ್ತ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಆಗಿನ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಗೋಡ್ಸೆಯನ್ನು ಸಮರ್ಥಿಸಿಕೊಂಡಿದ್ದರು. ಇವರ ಮೇಲೆ ಕ್ರಮ ಜರುಗಿಸದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಗಾಂಧಿ ಹಂತಕನ ಬೆಂಬಲಕ್ಕಿದ್ದಾರೆ ಅನಿಸುವುದಿಲ್ಲವೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಬಿಜೆಪಿ, ನೀವು ಗಾಂಧಿ ಹೆಸರನ್ನಷ್ಟೇ ಮೆತ್ತಿಕೊಂಡು ದೇಶದಲ್ಲಿ ಅವನತಿ ಹೊಂದಿದ್ದೀರಿ. ನಾವು ಗಾಧಿ ತತ್ವಗಳನ್ನು ಪಾಲಿಸಿ ಜಗತ್ತನ್ನೇ ಗೆಲ್ಲುತ್ತಿದ್ದೇವೆ ಎಂದು ಕಾಂಗ್ರೆಸ್ ಟ್ವೀಟ್ಗೆ ಪ್ರತಿಯಾಗಿ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ.