ಕರ್ನಾಟಕ

karnataka

ETV Bharat / city

ತುರಹಳ್ಳಿ ಟ್ರೀ ಪಾರ್ಕ್ ತಾತ್ಕಾಲಿಕ ಸ್ಥಗಿತ: ಸಚಿವ ಅರವಿಂದ ಲಿಂಬಾವಳಿ - ಸಚಿವ ಅರವಿಂದ ಲಿಂಬಾವಳಿ

ಸದ್ಯಕ್ಕೆ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಹಿಂದೆ 2012ರಲ್ಲಿ ಯೋಜನೆಗಾಗಿ ನಿಗದಿಪಡಿಸಿದ್ದ ಸ್ಥಳದಲ್ಲಿ ಯೋಜನೆಯ ಅನುಷ್ಠಾನ ಮಾಡುವ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಅರಣ್ಯ ರಕ್ಷಣೆಗಾಗಿ ಈ ಪ್ರದೇಶದ ಸುತ್ತಲೂ ಬೇಲಿ ಹಾಕಿ ಭದ್ರ ಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ತುರಹಳ್ಳಿ ಟ್ರೀ ಪಾರ್ಕ್ ತಾತ್ಕಾಲಿಕ ಸ್ಥಗಿತ
ತುರಹಳ್ಳಿ ಟ್ರೀ ಪಾರ್ಕ್ ತಾತ್ಕಾಲಿಕ ಸ್ಥಗಿತ

By

Published : Feb 18, 2021, 5:08 AM IST

ಬೆಂಗಳೂರು: ತುರಹಳ್ಳಿ ಟ್ರೀ ಪಾರ್ಕ್ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ತುರಹಳ್ಳಿ ಟ್ರೀ ಪಾರ್ಕ್ ಬಗ್ಗೆ ಸಾರ್ವಜನಿಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಜೊತೆ ತುರಹಳ್ಳಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಸಚಿವ ಅರವಿಂದ ಲಿಂಬಾವಳಿ ಈ ಬಗ್ಗೆ ಸ್ಪಷ್ಟಪಡಿಸಿದರು.

ತುರಹಳ್ಳಿ ಟ್ರೀ ಪಾರ್ಕ್ ತಾತ್ಕಾಲಿಕ ಸ್ಥಗಿತ: ಸಚಿವ ಅರವಿಂದ ಲಿಂಬಾವಳಿ

ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಹ ಕರೆದೊಯ್ದಿದ್ದ ಸಚಿವರು, ಸಾರ್ವಜನಿಕರ ಜೊತೆ ಸಂವಾದ ನಡೆಸಿ ಅವರ ಅಭಿಪ್ರಾಯ ಪಡೆದರು. ಸದ್ಯಕ್ಕೆ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಹಿಂದೆ 2012ರಲ್ಲಿ ಯೋಜನೆಗಾಗಿ ನಿಗದಿಪಡಿಸಿದ್ದ ಸ್ಥಳದಲ್ಲಿ ಯೋಜನೆಯ ಅನುಷ್ಠಾನ ಮಾಡುವ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಅರಣ್ಯ ರಕ್ಷಣೆಗಾಗಿ ಈ ಪ್ರದೇಶದ ಸುತ್ತಲೂ ಬೇಲಿ ಹಾಕಿ ಭದ್ರ ಪಡಿಸಲಾಗುತ್ತದೆ ಎಂದರು.

ತುರಹಳ್ಳಿ ಟ್ರೀ ಪಾರ್ಕ್ ತಾತ್ಕಾಲಿಕ ಸ್ಥಗಿತ: ಸಚಿವ ಅರವಿಂದ ಲಿಂಬಾವಳಿ

ನಮ್ಮ ಯೋಜನೆಯ ಅಂತಿಮ ಉದ್ದೇಶ ಅರಣ್ಯದ ರಕ್ಷಣೆಯೇ ಆಗಿದೆ. ಆದರೆ ಅದನ್ನು ಪ್ರಾಕೃತಿಕವಾಗಿ ಬಿಡಬೇಕು ಎಂಬ ನಿಮ್ಮ ಸಲಹೆಯನ್ನು ಸಹ ನಾನು ಗೌರವಿಸುತ್ತೇನೆ. ಮುಂದೆ ಇದರ ಬಗ್ಗೆ ಇನ್ನೂ ಹೆಚ್ಚಿನ ವಿಚಾರ ವಿನಿಮಯ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ABOUT THE AUTHOR

...view details