ಬೆಂಗಳೂರು:ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಕೆ ಶಶಿಕಲಾರನ್ನು ಭೇಟಿ ಮಾಡಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಕೇಂದ್ರ ಕಾರಾಗೃಹದ ಒಳಗಡೆ ಪ್ರವೇಶ ಪಡೆದಿದ್ದಾರೆ.
ಚಿನ್ನಮ್ಮ ಭೇಟಿಯಾಗಲು ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ಟಿಟಿವಿ ದಿನಕರನ್ - undefined
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಕೆ ಶಶಿಕಲಾರನ್ನು ಭೇಟಿ ಮಾಡಲು ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಆಗಮಿಸಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಚಿನ್ನಮ್ಮ ಭೇಟಿಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಇಂದು ಮುಂಜಾನೆ ಆಗಮಿಸಿದ್ದಾರೆ. ತಮಿಳುನಾಡಿನ ರಾಜಕೀಯ ಬೆಳವಣಿಗೆ ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣಾ ಸಂಬಂಧ ಚರ್ಚಿಸಲು ದಿನಕರನ್ ಆಗಮಿಸಿದ್ದಾರೆ. ಇನ್ನು ರಾಜಕಾರಣದ ಮುಂದಿನ ಹೆಜ್ಜೆಗಳ ಬಗ್ಗೆ ಶಶಿಕಲಾರೊಂದಿಗೆ ಚರ್ಚಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಬೆಳಗ್ಗೆ ಕೇಂದ್ರ ಕಾರಾಗೃಹದ ಒಳಗಡೆಗೆ ಪ್ರವೇಶ ಪಡೆದಿರುವ ದಿನಕರನ್, ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಂಜೆಯವರೆಗೂ ಚರ್ಚಿಸುವ ಸಾಧ್ಯತೆಯಿದೆ. ಜೈಲಿನಿಂದ ಹೊರಬಂದು ಮಾಧ್ಯಮಕ್ಕೆ ಭೇಟಿಯ ಅಧಿಕೃತ ಉದ್ದೇಶ ತಿಳಿಸಲಿರುವ ದಿನಕರನ್, ಸಂಜೆವರೆಗೂ ಶಶಿಕಲಾರೊಡನೆ ಚರ್ಚೆ ಮಾಡಲಿದ್ದಾರೆ.