ಬೆಂಗಳೂರು: ರಾಜ್ಯಸಭೆಯ ಹಾಲಿ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್ ಹಾಗೂ ನಟ ಬಿ.ವಿಜಯ್ ಕುಮಾರ್(ಸಂಚಾರಿ ವಿಜಯ್) ನಿಧನಕ್ಕೆ ವಿಧಾನಸಭೆಯಲ್ಲಿಂದು ಸಂತಾಪ ಸಲ್ಲಿಸಲಾಯಿತು. ಸಂತಾಪ ಸೂಚಕ ಮಂಡನೆ ಮೇಲೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ವಿಭಿನ್ನ ಅಪರೂಪದ ರಾಜಕಾರಣ ಆಸ್ಕರ್ ಫರ್ನಾಂಡಿಸ್ ಅವರು ಅತ್ಯಂತ ಸರಳ ಮತ್ತು ಸ್ವಚ್ಛ ರಾಜಕಾರಣಿಯಾಗಿದ್ದರು. ತಮ್ಮ ಜೀವನದ ಉದ್ದಕ್ಕೂ ಇದನ್ನೇ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಆಸ್ಕರ್ ಫರ್ನಾಂಡಿಸ್, ಸಂಚಾರಿ ವಿಜಯ್ ನಿಧನಕ್ಕೆ ವಿಧಾನಸಭೆ ಕಲಾಪದಲ್ಲಿ ಸಂತಾಪ - ವಿಧಾನಸಭೆಯಲ್ಲಿ ಸಂತಾಪ
ನಿನ್ನೆ ನಿಧನರಾದ ರಾಜ್ಯಸಭೆ ಹಾಲಿ ಸದಸ್ಯರು ಹಾಗೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್, ನಟ ಸಂಚಾರಿ ವಿಜಯ್ ನಿಧನಕ್ಕೆ ವಿಧಾನಸಭೆ ಕಲಾಪದಲ್ಲಿ ಸಂತಾಪ ಸಲ್ಲಿಸಲಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನಕ್ಕೆ ವಿಷಯ ತಿಳಿಸಿದರು. ಸಂತಾಪಕ ಸೂಚಕವನ್ನು ಬೆಂಬಲಿಸಿ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಫರ್ನಾಂಡಿಸ್, ಸಂಚಾರಿ ವಿಜಯ್ ಅವರ ಕೊಡುಗೆಯನ್ನು ಸ್ಮರಿಸಿದರು.

ಆಸ್ಕರ್ ಫರ್ನಾಂಡಿಸ್, ಸಂಚಾರಿ ವಿಜಯ್ ನಿಧನಕ್ಕೆ ವಿಧಾನಸಭೆ ಕಲಾಪದಲ್ಲಿ ಸಂತಾಪ
ಆಸ್ಕರ್ ಫರ್ನಾಂಡಿಸ್, ಸಂಚಾರಿ ವಿಜಯ್ ನಿಧನಕ್ಕೆ ವಿಧಾನಸಭೆ ಕಲಾಪದಲ್ಲಿ ಸಂತಾಪ
ನಮ್ಮ ಆದರ್ಶನಗಳು ಅಧಿಕಾರಕ್ಕೆ ಬಂದ ಮೇಲೆ ಪರಿಸ್ಥಿತಿಗೆ ಅನುಗಣವಾಗಿ ಬದಲಾಗುತ್ತವೆ. ಆದರೆ, ಫರ್ನಾಂಡಿಸ್ ಅವರ ತಮ್ಮ ಆದರ್ಶನಗಳನ್ನು ಎಂದೂ ಬದಲಾಯಿಸಿಕೊಂಡರವಲ್ಲ ಉಡುಪಿಯಲ್ಲಿದ್ದ ಫರ್ನಾಂಡಿಸ್ ಅವರು ದೆಹಲಿಗೆ ಹೋದ ಮೇಲೂ ಅದೇ ಗುಣ ಅವರಲ್ಲಿ ಇತ್ತು ಎಂದರು.
ಸಂತಾಪ ಸೂಚಕವನ್ನು ಬೆಂಬಲಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಸ್ಕರ್ ಫರ್ನಾಂಡಿಸ್ ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಯುವಕರು ರಾಜಕಾರಣಕ್ಕೆ ಬರಲು ಪ್ರೇರಣೆಯಾಗಿದ್ದರು ಎಂದರು. ಸಂಚಾರಿ ವಿಜಯ್ ಅವರ ಸಾಧನೆಗಳನ್ನು ಸ್ಮರಿಸಿದರು.