ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಹಾಗೂ ರಾತ್ರಿ ವೇಳೆ ಒಟ್ಟು 15 ಮಿ.ಮೀ ಮಳೆಯಾಗಿದೆ. ಇಂದು ಮತ್ತು ನಾಳೆಯೂ ಮೋಡಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗಲಿದೆ. ನಿನ್ನೆ ಸುರಿದ ಮಳೆ -ಗಾಳಿಗೆ ನಗರದ ಹಲವೆಡೆ ಮರಗಳು ನೆಲಕ್ಕುರುಳಿವೆ.
ಯಶವಂತಪುರ ಮೈಸೂರು ಲ್ಯಾಂಪ್ಸ್ ರಸ್ತೆಯಲ್ಲಿ ಬೆಳಗ್ಗೆ 6:30ರ ಸುಮಾರಿಗೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಸಂಪೂರ್ಣ ಎರಡೂ ರಸ್ತೆಗಳಿಗೂ ಅಡ್ಡವಾಗಿ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಪೂರ್ವ ವಲಯ:ಸಾಧಾರಣ ಮಳೆಯಾಗಿದ್ದು, ಹಲವೆಡೆ ಮರಗಳು ಬಿದ್ದಿರುವ ದೂರುಗಳು ಪಾಲಿಕೆಗೆ ಬಂದಿವೆ. ಸದ್ಯ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಓಂಬರ್ ಲೇಔಟ್ನ, ಸಿಎಮ್ಆರ್ ಲಾ ಕಾಲೇಜ್ ಬಳಿ ಮೊದಲನೇ ಕ್ರಾಸ್ನಲ್ಲಿ ಮರ ಬಿದ್ದಿದ್ದು ತೆರವು ಮಾಡಲಾಗಿದೆ. ಹೈಗ್ರೌಂಡ್ ಹಾಗೂ ಕೆ.ಆರ್ ಗಾರ್ಡನ್ ಮೊದಲನೇ ಹಂತದಲ್ಲೂ ಬಿದ್ದ ಮರವನ್ನು ತೆರವು ಮಾಡಲಾಗಿದೆ.
ಪಶ್ಚಿಮ ವಲಯ-ಕಡಿಮೆ ಪ್ರಮಾಣದ ಮಳೆಯಾಗಿದ್ದು, ಯಾವುದೇ ಸಮಸ್ಯೆ ಆಗಿಲ್ಲ.