ಕರ್ನಾಟಕ

karnataka

ETV Bharat / city

ದೇಶದ್ರೋಹ ಪ್ರಕರಣ: ಮಾ. 5ರವರೆಗೆ ಅಮೂಲ್ಯಗೆ ನ್ಯಾಯಾಂಗ ಬಂಧನ - ಕೋರಮಂಗಲದ ಎನ್ ಜಿವಿ ಬಡಾವಣೆಯಲ್ಲಿರುವ ಐದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ

ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್​​ಗೆ ಮಾ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಜಗದೀಶ್ ಆದೇಶ ಹೊರಡಿಸಿದ್ದಾರೆ.

Kn_bng_06_amulya_jc_custody_script_7202806
ದೇಶದ್ರೋಹ ಪ್ರಕರಣ, ಮಾ.5ರವರೆಗೆ ಅಮೂಲ್ಯ ನ್ಯಾಯಾಂಗ ಬಂಧನ...!

By

Published : Feb 29, 2020, 9:11 PM IST

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್​​ಗೆ ಮಾ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಜಗದೀಶ್ ಆದೇಶ ಹೊರಡಿಸಿದ್ದಾರೆ.

ದೇಶದ್ರೋಹ ಪ್ರಕರಣ: ಮಾ. 5ರವರೆಗೆ ಅಮೂಲ್ಯಗೆ ನ್ಯಾಯಾಂಗ ಬಂಧನ

ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಕೋರಮಂಗಲದ ಎನ್​​ಜಿವಿ ಬಡಾವಣೆಯಲ್ಲಿರುವ ಐದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಅಮೂಲ್ಯಳನ್ನು ಉಪ್ಪಾರಪೇಟೆ ಪೊಲೀಸರು ಹಾಜರುಪಡಿಸಿದರು. ಪೊಲೀಸ್ ವಿಚಾರಣೆ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮಾ. 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಆದೇಶದ ಬೆನ್ನಲ್ಲೇ ಅಮೂಲ್ಯಳನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.

ನಾಲ್ಕು ದಿನಗಳಿಂದ ಎಸ್ಐಟಿ ಅಮೂಲ್ಯಳನ್ನು ಆಕೆ ವಾಸ ಮಾಡುತ್ತಿದ್ದ ಪಿಜಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಗಳು ಸಹ ಪ್ರಕರಣದ ಮಾಹಿತಿಯನ್ನು ಎಸ್ಐಟಿಯಿಂದ ಪಡೆದುಕೊಂಡಿದ್ದವು.

ABOUT THE AUTHOR

...view details