ಕರ್ನಾಟಕ

karnataka

ETV Bharat / city

ಸಾರಿಗೆ ನೌಕರರು ಸರ್ಕಾರದ ವಿರುದ್ಧ ಮತ್ತೆ ಗರಂ: ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ‌ - Transportation employees protest at Bangalore

ತಮ್ಮ 9 ಬೇಡಿಕೆಗಳನ್ನ ಈಡೇರಿಸುವಂತೆ ಇಂದಿನಿಂದ ಏಪ್ರಿಲ್ 7ನೇ ತಾರೀಖಿನವರೆಗೆ ವಿನೂತನ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.

Transportation employees protest at Bangalore
9 ಬೇಡಿಕೆಗಳನ್ನ ಈಡೇರಿಸುವಂತೆ ಸಾರಿಗೆ ನೌಕರರ ಪ್ರತಿಭಟನೆ

By

Published : Apr 1, 2021, 11:51 AM IST

ಬೆಂಗಳೂರು: ಇಂದಿನಿಂದ ಸಾರಿಗೆ ನೌಕರರು ಸರ್ಕಾರದ ವಿರುದ್ದ ವಿನೂತನ ಪ್ರತಿಭಟನೆ ಮುಂದಾಗಿದ್ದು, ಮೆಜೆಸ್ಟಿಕ್​ನಲ್ಲಿ ನಾಲ್ಕು ನಿಗಮದ ನೌಕರರು ತಮ್ಮ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

9 ಬೇಡಿಕೆಗಳನ್ನ ಈಡೇರಿಸುವಂತೆ ಸಾರಿಗೆ ನೌಕರರ ಪ್ರತಿಭಟನೆ

ತಮ್ಮ 9 ಬೇಡಿಕೆಗಳನ್ನ ಈಡೇರಿಸುವಂತೆ ಇಂದಿನಿಂದ ಏಪ್ರಿಲ್ 7ನೇ ತಾರೀಖಿನವರೆಗೆ ವಿನೂತನ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೈಗಳಿಗೆ ಕಪ್ಪುಪಟ್ಟಿ ಧರಿಸುವುದರ ಜೊತೆಗೆ 'ನಮ್ಮ ಹೋರಾಟ ನ್ಯಾಯಯುತವಾದ ಬೇಡಿಕೆಗಾಗಿ' ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

9 ಬೇಡಿಕೆಗಳನ್ನ ಈಡೇರಿಸುವಂತೆ ಸಾರಿಗೆ ನೌಕರರ ಪ್ರತಿಭಟನೆ

ಇಂದು ಕಪ್ಪು ಪಟ್ಟಿ ಪ್ರದರ್ಶನ, ಏಪ್ರಿಲ್ 2ರಂದು ಬೆಂಗಳೂರಿನ ಸರ್ಕಲ್​ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ - ಬೊಂಡಾ ಮಾರಾಟ, ಏ 3ರಂದು ನೌಕರರ ಕುಟುಂಬದವರೊಂದಿಗೆ ನಗರಗಳ ಸರ್ಕಲ್​ಗಳಲ್ಲಿ ಮಾನವ ಸರಪಳಿ ಮಾಡಿ ಭಿತ್ತಿಪತ್ರ ಪ್ರದರ್ಶನ, ಏ. 4ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಏ. 5ರಂದು ಧರಣಿ ಸತ್ಯಾಗ್ರಹ, ಏ. 5ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ, ಏ. 7ರಂದು ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.

ಓದಿ:ಇಂದಿನಿಂದ 5,500 ಕೇಂದ್ರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಸಚಿವ ಸುಧಾಕರ್​

ABOUT THE AUTHOR

...view details