ಬೆಂಗಳೂರು:ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಮಾತುಕತೆ ಅಪೂರ್ಣವಾಗಿದೆ. ಇದರಿಂದಾಗಿ ನಾಳೆಯೂ ಕೂಡಾ ಮುಷ್ಕರ ಮುಂದುವರೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಅವರು, ಸರ್ಕಾರ ನಮ್ಮೊಂದಿಗೆ ಅಪೂರ್ಣವಾದ ಚರ್ಚೆ ಮಾಡಿದೆ. ಸಿಎಂ ಬಿಎಸ್ವೈ ತೀರ್ಮಾನ ಕೈಗೊಳ್ಳುವುದರಿಂದ ಹಿಂದೆ ಸರಿದಿದ್ದಾರೆ. ನಾಳೆಯೂ ಮುಷ್ಕರ ನಡೆಯಲಿದೆ. ಈ ಮುಷ್ಕರಕ್ಕೆ ಖಾಸಗಿ ಬಸ್ ಮಾಲೀಕರ ಸಂಘ ಕೂಡಾ ಬೆಂಬಲ ನೀಡಿದೆ ಎಂದರು.
ಸೀಬೆಹಣ್ಣು, ಕಡಲೆಕಾಯಿ ಇಂದಿನ ಉಪವಾಸ ಮುಗಿಸಿ ಮಾತನಾಡಿದ ಅವರು ನಾಳೆ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ನಾಳೆ ರಾಜ್ಯದಲ್ಲಿ ಬಸ್ ಸಂಚಾರ ಇರೋದಿಲ್ಲ. ಸಚಿವರು ಮಾಧ್ಯಮಗಳಿಗೆ ಸುಳ್ಳು ಹೇಳಿದ್ದಾರೆ. ಯಾವುದೇ ಸಂಧಾನ ಯಶಸ್ವಿಯಾಗಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.