ಕರ್ನಾಟಕ

karnataka

ETV Bharat / city

ಸಾರಿಗೆ ನೌಕರರ ಒಂದು ದಿನದ ಮುಷ್ಕರದಿಂದ ಆದ ನಷ್ಟವೆಷ್ಟು ಗೊತ್ತಾ?

ಆರನೇ ವೇತನ ಆಯೋಗ ಜಾರಿ ಮಾಡುವಂತೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಬಸ್​ ಒಂದು ದಿನದ ಮಟ್ಟಿಗೆ ನಿಂತರೆ ಎಷ್ಟು ನಷ್ಟ ಉಂಟಾಗುತ್ತದೆ ಎಂಬುದನ್ನು ತಿಳಿಯಬೇಕಾದರೆ ಈ ಮಾಹಿತಿಯನ್ನೊಮ್ಮೆ ಓದಿ ಬಿಡಿ.

transport-employees-strike-loss
ಸಾರಿಗೆ ನೌಕರರ ಒಂದು ದಿನದ ಮುಷ್ಕರದಿಂದ ನಷ್ಟವೆಷ್ಟು ಗೊತ್ತಾ?

By

Published : Apr 7, 2021, 7:46 PM IST

Updated : Apr 7, 2021, 8:11 PM IST

ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ಸುಮಾರು 14 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು 2.5ರಿಂದ 3 ಕೋಟಿಯಷ್ಟು ಇದೆ. ಕೆಎಸ್ಆರ್​ಟಿಸಿಯ ನಿತ್ಯದ ಆದಾಯ 7 ಕೋಟಿ, ವಾಯವ್ಯ ಸಾರಿಗೆಯದ್ದು 2 ಕೋಟಿ, ಈಶಾನ್ಯ ಸಾರಿಗೆ 2 ಕೋಟಿ ಆದಾಯವಿದೆ.

ಇದೀಗ ಸಾರಿಗೆ ನೌಕರರ ಮುಷ್ಕರದಿಂದ ಕೋಟಿ ಕೋಟಿ ನಷ್ಟವಾಗುತ್ತಿದೆ‌. ‌ಈಗಾಗಲೇ ಕೋವಿಡ್​ನಿಂದಲೇ ಸಾಕಷ್ಟು ನಷ್ಟ ಅನುಭವಿಸಿದ್ದ ನಿಗಮಗಳಿಗೆ, ಬಸ್ ಕಾರ್ಯಾಚರಣೆ ಇಲ್ಲದೇ ಇರುವುದು ಇನ್ನಷ್ಟು ಆಘಾತ ಉಂಟು ಮಾಡಿದೆ. ಈ ಹಿಂದೆ ಡಿಸೆಂಬರ್ 11ರಿಂದ 14ರವರೆಗೆ ದಿಢೀರ್ ಬಸ್​ ಸ್ಥಗಿತಗೊಳಿಸಲಾಗಿತ್ತು. ಇದರಿಂದ ನಿಗಮಕ್ಕೆ 2,250 ಕೋಟಿ ರೂಪಾಯಿ ನಷ್ಟ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗಿತ್ತು.

ಕಳೆದ ಲಾಕ್​ಡೌನ್​​, ಕೊರೊನಾದಿಂದ ನಿಗಮಗಳಿಗಾದ ಅಂದಾಜು ನಷ್ಟ

  • ಕೆಎಸ್​ಆರ್​ಟಿಸಿ- ಒಟ್ಟು ನಷ್ಟದ ಪ್ರಮಾಣ- 900 ಕೋಟಿ ರೂ.
  • ಬಿಎಂಟಿಸಿ- ಒಟ್ಟು ನಷ್ಟದ ಪ್ರಮಾಣ- 450 ಕೋಟಿ ರೂ.
  • ಎನ್​ಡಬ್ಲ್ಯೂಕೆಆರ್​ಟಿಸಿ-ಒಟ್ಟು ನಷ್ಟದ ಪ್ರಮಾಣ- 510 ಕೋಟಿ ರೂ.
  • ಎನ್​ಇಕೆಆರ್​ಟಿಸಿ-ಒಟ್ಟು ನಷ್ಟದ ಪ್ರಮಾಣ- 400 ಕೋಟಿ ರೂ.

ಸಾರಿಗೆ ಸಿಬ್ಬಂದಿ ವಿವರ

ಕೆಎಸ್​ಆರ್​ಟಿಸಿಯಲ್ಲಿ 37 ಸಾವಿರ ಸಿಬ್ಬಂದಿ, ಬಿಎಂಟಿಸಿಯಲ್ಲಿ 36 ಸಾವಿರ ಸಿಬ್ಬಂದಿ, ಎನ್​ಡಬ್ಲ್ಯೂಕೆಆರ್​ಟಿಸಿಯಲ್ಲಿ 25 ಸಾವಿರ ಸಿಬ್ಬಂದಿ, ಎನ್​ಇಕೆಆರ್​ಟಿಸಿಯಲ್ಲಿ 22 ಸಾವಿರ ಸಿಬ್ಬಂದಿ ಇದ್ದಾರೆ. ನಾಲ್ಕು ನಿಗಮಗಳಿಂದ ಒಟ್ಟು ಸಾರಿಗೆ ಸಿಬ್ಬಂದಿ ಸಂಖ್ಯೆ 1 ಲಕ್ಷದ 20 ಸಾವಿರ ಮಂದಿ ಇದ್ದಾರೆ.

ಇದನ್ನೂ ಓದಿ:ಮೈಸೂರು ರೇಸ್ ಕ್ಲಬ್​​​ಗೆ ಸರ್ಕಾರಿ ಭೂಮಿ ಗುತ್ತಿಗೆ: ಆದೇಶ ಹಿಂಪಡೆಯಲು ಸರ್ಕಾರಕ್ಕೆ ಕೊನೆಯ ಅವಕಾಶ

ನಾಲ್ಕೂ ನಿಗಮಗಳಿಗೆ ತಿಂಗಳ ಸಂಬಳಕ್ಕೆ ಬೇಕಾಗುವ ಹಣ 320 ಕೋಟಿ ರೂಪಾಯಿ ಇದ್ದು, ಭತ್ಯೆ ಸೇರಿ ಪ್ರತಿ ತಿಂಗಳು ಸುಮಾರು 320 ಕೋಟಿ ರೂಪಾಯಿಗಳಷ್ಟು ಬೇಕಾಗುತ್ತದೆ. ಇದೀಗ ನೌಕರರ ಮುಷ್ಕರದಿಂದ ಮತ್ತೆ ನಷ್ಟದ ಸುಳಿಯಲ್ಲಿ ನಿಗಮಗಳು ಸಿಲುಕಿವೆ.

Last Updated : Apr 7, 2021, 8:11 PM IST

ABOUT THE AUTHOR

...view details