ಕೆ.ಆರ್.ಪುರ(ಬೆಂಗಳೂರು):ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿ ಗೃಹಪ್ರವೇಶ ಸಮಾರಂಭ ಮಾಡುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗ್ಯಾಂಗ್ವೊಂದು 25 ಸಾವಿರ ಕೊಡುವಂತೆ ಮನೆ ಮಾಲೀಕನಿಗೆ ಆವಾಜ್ ಹಾಕಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರ ಕ್ಷೇತ್ರದ ಕಲ್ಕರೆಯ ಚನ್ನಸಂದ್ರದಲ್ಲಿದಲ್ಲಿ ನಡೆದಿದೆ.
ಲೋಕೇಶ್ ಎಂಬುವರು ಹೊಸ ಮನೆ ಕಟ್ಟಿ ಗೃಹಪ್ರವೇಶ ಸಮಾರಂಭ ಮಾಡುತ್ತಿದ್ದರು. ಈ ವೇಳೆ, ಮನೆಗೆ ನುಗ್ಗಿದ ಮಂಗಳಮುಖಿಯರು 25 ಸಾವಿರ ರೂಪಾಯಿ ನೀಡುವಂತೆ ಕಿರಿಕ್ ಮಾಡಿ ದಾಂಧಲೆ ಎಬ್ಬಿಸಿದ್ದಾರೆ. ಅಷ್ಟು ಹಣ ಕೊಡಲು ಸಾಧ್ಯವಿಲ್ಲ, 2,500 ಸಾವಿರ ರೂಪಾಯಿ ಕೊಡುತೇವೆ ಪ್ರೀತಿಯಿಂದ ತೆಗೆದುಕೊಂಡು ಊಟ ಮಾಡಿ ಹೋಗಿ ಎಂದು ಮಾಲೀಕರು ಹೇಳಿದ್ದಾರೆ.