ಬೆಂಗಳೂರು: ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಹಿನ್ನೆಲೆ ವಿವಿಧ ಇಲಾಖೆಗಳು ತಮ್ಮ ಸಿಬ್ಬಂದಿ ವರ್ಗದ ವರ್ಗಾವಣೆ ಆದೇಶ ಹೊರಡಿಸಿವೆ. ಮೇ 1ರಿಂದ ಜೂನ್ 15 ರವರೆಗೆ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಹಲವು ಇಲಾಖೆಗಳು ವರ್ಗಾವಣೆ ಆದೇಶ ಹೊರಡಿಸಿವೆ.
ಕೃಷಿ ಇಲಾಖೆ ಸಿ ಮತ್ತು ಡಿ ವೃಂದದ ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೃಷಿ ಇಲಾಖೆಯ 24 ಅಧೀಕ್ಷಕರು, 21 ಪ್ರಥಮ ದರ್ಜೆ ಸಹಾಯಕರು, 3 ಶೀಘ್ರಲಿಪಿಗಾರರು, 2 ಬೆರಳಚ್ಚುಗಾರರು, 1 - ಪ್ರಯೋಗ ಶಾಲಾ ಸಹಾಯಕರು, 22 ದ್ವಿತೀಯ ದರ್ಜೆ ಸಹಾಯಕರು, 15 ಡಿ ದರ್ಜೆ ಸಿಬ್ಬಂದಿ/ ನೌಕರರನ್ನು ವರ್ಗಾಯಿಸಲಾಗಿದೆ.
ಇತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಸಹ ಬೋಧಕ ಮುಖ್ಯೋಪಾಧ್ಯಾಯ ವೃಂದದ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಒಟ್ಟು 12 ಬೋಧಕ ಮುಖ್ಯೋಪಾಧ್ಯಾಯ ವೃಂದದ ಅಧಿಕಾರಿಗಳನ್ನು ವರ್ಗಾಯಿಲಾಗಿದೆ. ಜಲಸಂಪನ್ಮೂಲ ಇಲಾಖೆ ತನ್ನ 16 ಕಾರ್ಯಪಾಲಕ ಇಂಜಿನಿಯರ್ಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಕೆಪಿಟಿಸಿಎಲ್ನಲ್ಲಿ 20 ಮಂದಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳನ್ನು ವರ್ಗಾಯಿಸಿ ಆದೇಶಿಸಲಾಗಿದೆ.
ಅದೇ ರೀತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ವಿವಿಧ ವೃಂದದ 44 ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ 19 ಮಂದಿ ವೈದ್ಯಾಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಇದನ್ನೂ ಓದಿ:ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಲೀಂ, ಇತರ ಕೈ ನಾಯಕರಿಗೆ ಜಾಮೀನು ಮಂಜೂರು