ಕರ್ನಾಟಕ

karnataka

ETV Bharat / city

ವಿದೇಶಿ ಅಂಚೆ ಮೂಲಕ ಅಕ್ರಮ ಜಿಂಕೆ ಚರ್ಮ ಸಾಗಣೆ: ದೇವನಹಳ್ಳಿಯಲ್ಲಿ ಪ್ರಕರಣ - ಜಿಂಕೆ ಚರ್ಮ,

ವಿದೇಶಿ ಅಂಜೆ ಮೂಲಕ ಬೆಂಗಳೂರಿಗೆ ಟ್ಯಾನ್​​​ ಸ್ಪಾಟೆಡ್​ ಫಾಲೋ ಜಿಂಕೆ ಚರ್ಮವನ್ನು ಕಳ್ಳಸಾಗಾಣಿಕೆ ಮಾಡಿದ್ದ ಪ್ರಕರಣವನ್ನು ಬೆಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

trafficking-in-deer-skin-by-foreign-post-office
ಜಿಂಕೆ ಚರ್ಮ

By

Published : Aug 31, 2021, 3:12 PM IST

ದೇವನಹಳ್ಳಿ: ಅಂಚೆ ಮೂಲಕ ಜಿಂಕೆ ಚರ್ಮವನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲಾದ ಪ್ರಕರಣವನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ವಿದೇಶಿ ಅಂಚೆ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮವನ್ನು ಕಳ್ಳಸಾಗಾಣಿಕೆ ಮಾಡಲಾಗಿತ್ತು. ಪೋಲೆಂಡ್​ ನಿಂದ ಅಕ್ರಮವಾಗಿ ಜಿಂಕೆ ಚರ್ಮವನ್ನು ಸಾಗಾಣಿಕೆ ಮಾಡಿರುವುದು ಬಯಲಿಗೆ ಬಂದಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಅಡಿಯಲ್ಲಿ ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮ ಕಳ್ಳ ಸಾಗಣಿಕೆ ನಿಷೇಧಿಸಲಾಗಿದೆ. ಸದ್ಯ ಜಿಂಕೆ ಚರ್ಮವನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ABOUT THE AUTHOR

...view details