ಬೆಂಗಳೂರು:ಎರಡು ದಿನಗಳ ಹಿಂದೆಯಷ್ಟೇ ಜಯನಗರ ಸಂಚಾರಿ ಠಾಣೆ ಸೇರಿದಂತೆ ವಿವಿಧ ಠಾಣೆಗಳು ಬಳಸುವ ಅಧಿಕೃತ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಇದೀಗ ಮತ್ತೆ ಮೂರು ಪೊಲೀಸ್ ಸ್ಟೇಷನ್ಗಳ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.
ಮತ್ತೆ ಮೂರು ಸಂಚಾರಿ ಪೊಲೀಸ್ ಠಾಣೆಗಳ ಟ್ವಿಟರ್ ಖಾತೆ ಹ್ಯಾಕ್ - Bangalore crime news
ಎರಡು ದಿನಗಳ ಹಿಂದೆ ಸಂಚಾರಿ ಪೊಲೀಸ್ ಠಾಣೆಗಳ ಅಧಿಕೃತ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
![ಮತ್ತೆ ಮೂರು ಸಂಚಾರಿ ಪೊಲೀಸ್ ಠಾಣೆಗಳ ಟ್ವಿಟರ್ ಖಾತೆ ಹ್ಯಾಕ್](https://etvbharatimages.akamaized.net/etvbharat/prod-images/768-512-4592858-thumbnail-3x2-hack.jpg)
traffic-police-twitter-accounts-hack
ಈ ಬಾರಿ ಶಿವಾಜಿನಗರ ಹಾಗೂ ಒಲ್ಡ್ ಏರ್ಪೋರ್ಟ್ ಹಾಗೂ ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆಗಳ ಟ್ವಿಟರ್ ಖಾತೆ ಹ್ಯಾಕ್ ಮಾಡಿದ್ದಾರೆ. ಕಿಡಿಗೇಡಿಗಳ ಸುಪರ್ದಿಯಲ್ಲಿರುವ ಅಕೌಂಟ್ಗಳಿಂದ ಫೋನ್ ಪೇ ಹಾಗೂ ಒಲಾ ಕ್ಯಾಬ್ ಸೇರಿದಂತೆ ವಿವಿಧ ಕಂಪನಿಗಳ ಜಾಹೀರಾತು ಪೋಸ್ಟ್ ಬರುತ್ತಿವೆ ಎನ್ನಲಾಗಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 29, 2019, 7:54 PM IST