ಕರ್ನಾಟಕ

karnataka

ETV Bharat / city

ಡ್ರಂಕ್ ಅಂಡ್​​ ಡ್ರೈವ್​ ತಪಾಸಣೆ ನಡೆಸಲು ಸಂಚಾರಿ ಪೊಲೀಸರ ತಯಾರಿ ಹೇಗಿದೆ ಗೊತ್ತಾ? - Traffic Police Preparation for Inspect the Drunk and Drive

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಡ್ರಂಕ್ ಅಂಡ್​​ ಡ್ರೈವ್​ ತಪಾಸಣೆಗೆ ಟ್ರಾಫಿಕ್ ಪೊಲೀಸರು ಬ್ರೇಕ್ ಹಾಕಿದ್ದರು‌. ಸದ್ಯ ಕೋವಿಡ್ ಮಾರ್ಗಸೂಚಿ ಪಾಲನೆ ಜೊತೆಗೆ ವಾಹನ ಸವಾರರ ಡ್ರಂಕ್ ಅಂಡ್​​​ ಡ್ರೈವ್​ ತಪಾಸಣೆಗೆ ಅಣಿಯಾಗಿದ್ದಾರೆ.

traffic-police-preparation-for-inspect-the-drunk-and-drive
ಡ್ರಂಕ್ ಆ್ಯಂಡ್​ ಡ್ರೈವ್​ ತಪಾಸಣೆ ನಡೆಸಲು ಸಂಚಾರಿ ಪೊಲೀಸರ ತಯಾರಿ ಹೇಗಿದೆ ಗೊತ್ತಾ?

By

Published : Feb 15, 2021, 1:53 PM IST

ಬೆಂಗಳೂರು: ಕೊರೊನಾ‌ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ‌ ಸ್ಥಗಿತಗೊಳಿಸಲಾಗಿದ್ದ ಡ್ರಂಕ್ ಅಂಡ್​​​ ಡ್ರೈವ್​ ತಪಾಸಣೆ ಮತ್ತೆ ಆರಂಭಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಡ್ರಂಕ್ ಅಂಡ್​ ಡ್ರೈವ್​ ತಪಾಸಣೆಗೆ ಟ್ರಾಫಿಕ್ ಪೊಲೀಸರು ಬ್ರೇಕ್ ಹಾಕಿದ್ದರು‌. ಸದ್ಯ ಕೋವಿಡ್ ಮಾರ್ಗಸೂಚಿ ಪಾಲನೆ ಜೊತೆಗೆ ವಾಹನ ಸವಾರರ ಡ್ರಂಕ್ ಅಂಡ್​ ಡ್ರೈವ್​ ತಪಾಸಣೆಗೆ ಅಣಿಯಾಗಿದ್ದಾರೆ.

ತಪಾಸಣೆ ಹೇಗಿರುತ್ತೆ ಗೊತ್ತಾ ?

ಬೆಂಗಳೂರು ಸಂಚಾರಿ ಪೊಲೀಸರ ಬಳಿ 600 ಆಲ್ಕೋ ಮೀಟರ್​ಗಳಿದ್ದು, ಡ್ರಂಕ್ ಅಂಡ್​ ಡ್ರೈವ್ ತಪಾಸಣೆಗೆ ಮುನ್ನ ಆಲ್ಕೋ ಮೀಟರ್​ಗಳನ್ನು​ ಸ್ಯಾನಿಟೈಸ್​ ಮಾಡಲಾಗುತ್ತೆ. ವಾಹನ ಸವಾರರು ಮದ್ಯ ಸೇವನೆ ಬಗ್ಗೆ ಅನುಮಾನ ಬಂದರೆ ಆಲ್ಕೋ ಮೀಟರ್​ ಮೂಲಕ ತಪಾಸಣೆ ಮಾಡಲಾಗುತ್ತೆ.

ಈ ಹಿಂದೆ ಒಂದೇ ಆಲ್ಕೋ ಮೀಟರ್​ನಲ್ಲಿ ಬೇರೆ - ಬೇರೆ ಸ್ಟ್ರಾಗಳನ್ನ ಬಳಸಿ ತಪಾಸಣೆ ನಡೆಸಲಾಗುತ್ತಿತ್ತು. ಆದ್ರೀಗ ತಪಾಸಣೆ ಮಾಡಿರುವ ಆಲ್ಕೋ ಮೀಟರ್​ ಮತ್ತೊಬ್ಬರಿಗೆ ಬಳಸುವುದಿಲ್ಲ. ತಪಾಸಣೆ ನಡೆಸಿದ ಆಲ್ಕೋ ಮೀಟರ್​ಗಳನ್ನು​ ಪ್ರತ್ಯೇಕವಾಗಿ ಇಟ್ಟು, ವೈದ್ಯಕೀಯ ನಿಯಮದಂತೆ ಆಲ್ಕೋ ಮೀಟರ್​ನ್ನು ಸ್ಯಾನಿಟೈಸ್​ ಮಾಡಿ ಮೂರು ದಿನಗಳ ನಂತರ ಬಳಸಲಾಗುತ್ತೆ.

ಸಂಚಾರಿ ಪೊಲೀಸರು ಡ್ರಂಕ್ ಅಂಡ್​ ಡ್ರೈವ್ ತಪಾಸಣೆ ಮಾಡುವಾಗ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್​, ಮಾಸ್ಕ್ ಕಡ್ಡಾಯವಾಗಿ ಬಳಸಲು ಪೂರ್ವ ಸಿದ್ಧತೆ ನಡೆಸಿಕೊಂಡಿದ್ದಾರೆ. 2020ರಲ್ಲಿ 5,343 ಡ್ರಂಕ್ ಆ್ಯಂಡ್​ ಡ್ರೈವ್ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಜನವರಿಯಲ್ಲಿ 1,200, ಫೆಬ್ರವರಿಯಲ್ಲಿ 1,450, ಮಾರ್ಚ್​ನಲ್ಲಿ 1,650 ಕೇಸ್​ಗಳು ದಾಖಲಾಗಿದ್ದವು. ಆ ಬಳಿಕ ಲಾಕ್​ಡೌನ್ ಹಾಗೂ ಕೊರೊನಾದಿಂದ ತಪಾಸಣೆ ಸ್ಥಗಿತವಾಗಿತ್ತು.

ABOUT THE AUTHOR

...view details