ಬೆಂಗಳೂರು: ಜಗಜೀವನರಾಂನಗರದಲ್ಲಿ ಪೌರಕಾರ್ಮಿಕನ ಮೇಲೆ ಮಾಗಡಿ ರಸ್ತೆ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ನಡೆಸಿದ ಹಲ್ಲೆಗೆ ಸಂಬಂಧ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಖಂಡನೆ ವ್ಯಕ್ತಪಡಿಸಿದೆ.
ಪೌರಕಾರ್ಮಿಕನ ಮೇಲೆ ಟ್ರಾಫಿಕ್ ಇನ್ಸ್ಪೆಕ್ಟರ್ ಕಪಾಳಮೋಕ್ಷ ಪ್ರಕರಣ: ರಾಜ್ಯ ಸಫಾಯಿ ಕಾರ್ಮಚಾರಿಗಳ ಆಯೋಗದ ವಿರೋಧ - inspector slaps on civic worker
ಪೌರಕಾರ್ಮಿಕರ ಮೇಲೆ ದರ್ಪ ತೋರಿರುವ ಅಧಿಕಾರಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಪ್ರಕರಣದ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ ಶಿವಣ್ಣ ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಟ್ರಾಫಿಕ್ ಇನ್ಸ್ಪೆಕ್ಟರ್ ಕಪಾಳಮೋಕ್ಷ ಪ್ರಕರಣ
ಶನಿವಾರ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಬಿಬಿಎಂಪಿ ಪೌರಕಾರ್ಮಿಕ ಆಂಜಿ ಎಂಬುವರ ಕಪಾಳಮೋಕ್ಷ ಮಾಡಿದ್ದರು. ನಗರವನ್ನ ಸ್ವಚ್ಚವಾಗಿಟ್ಟು ಮತ್ತು ಸಾರ್ವಜನಿಕರ ಆರೋಗ್ಯವನ್ನ ಕಾಪಾಡಲು ಶ್ರಮಿಸುವ ಆರೋಗ್ಯ ರಕ್ಷಕರಾದ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿರೋದು ಖಂಡನೀಯ.
ಪೌರಕಾರ್ಮಿಕನ ಮೇಲೆ ಟ್ರಾಫಿಕ್ ಇನ್ಸ್ಪೆಕ್ಟರ್ ಕಪಾಳಮೋಕ್ಷ
ಈ ರೀತಿ ಪೌರಕಾರ್ಮಿಕರ ಮೇಲೆ ದರ್ಪ ತೋರಿರುವ ಅಧಿಕಾರಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಪ್ರಕರಣದ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಎಂ ಶಿವಣ್ಣ ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.